Friday, March 29, 2024
spot_img
HomeBangalore Ruralಶಿಕ್ಷಣದ ಜೊತೆಜೊತೆಯಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೂ ಉತ್ತೇಜನ ಆಕಾಶ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳಿಂದ ವಸ್ತುಪ್ರದರ್ಶನ

ಶಿಕ್ಷಣದ ಜೊತೆಜೊತೆಯಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೂ ಉತ್ತೇಜನ ಆಕಾಶ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳಿಂದ ವಸ್ತುಪ್ರದರ್ಶನ

ಪಾಲಾರ್ ಪತ್ರಿಕೆ | Palar Pathrike

ದೇವನಹಳ್ಳಿ: ಶಿಕ್ಷಣದ ಜೊತೆಜೊತೆಯಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೂ ಉತ್ತೇಜನ ನೀಡಲಾಗುತ್ತಿದ್ದು, ಶಾಲೆಯಲ್ಲಿನ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಕಾಶ್ ಇಂಟರ್‌ನ್ಯಾಷನಲ್ ಶಾಲೆಯ ಆಡಳಿತಾಧಿಕಾರಿ ಅಮರ್‌ಗೌಡ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಆಕಾಶ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿವಿಧ ವಿಷಯಗಳ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಾಲಾ ಹಂತದಲ್ಲಿ ಪುಸ್ತಕದ ಜೊತೆಯಲ್ಲಿ ಪ್ರಾಯೋಗಿಕವಾಗಿ ಸದೃಢವಾಗಲು ಕಾರ್ಯಕ್ರಮ ಮಾಡಲಾಗುತ್ತಿದೆ. ವರ್ಷವಿಡೀ ಶಾಲೆಯಲ್ಲಿ ಪಾಠ ಪ್ರವಚನಗಳ ಮಧ್ಯೆ ಪುಸ್ತಕಕ್ಕೆ ಸೀಮಿತಗೊಳ್ಳದೆ, ಅದನ್ನು ಪ್ರಯೋಗಿಕವಾಗಿ ತೋರಿಸುವ ಹಾಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ. ಕನ್ನಡ, ಗಣಿತ, ವಿಜ್ಞಾನ ಮತ್ತು ಸಮಾಜ ಸೇರಿದಂತೆ ಹಲವಾರು ವಿಷಯಗಳ ಜ್ಞಾನಾರ್ಜನೆಗಾಗಿ ಮಕ್ಕಳು ಶಾಲಾ ಹಂತದಲ್ಲಿಯೇ ಎಲ್ಲವನ್ನು ತಿಳಿದುಕೊಳ್ಳುವ ಸಲುವಾಗಿ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ವರ್ಷವಿಡೀ ಓದಿ ಏನೆಲ್ಲಾ ವಿಷಯಗಳಲ್ಲಿ ಪರಿಣಿತರಾಗಿದ್ದಾರೆ ಮತ್ತು ಎಷ್ಟರ ಮಟ್ಟಿಗೆ ವಿಷಯವನ್ನು ಗ್ರಹಿಸಿದ್ದಾರೆಂಬುವುದನ್ನು ತಿಳಿಸುವ ಪ್ರಯತ್ನವಾಗಿದ್ದು, ಇದೊಂದು ವಿದ್ಯಾರ್ಥಿಗಳಿಗೆ ಉತ್ತಮ ಅನುಭವವಾಗುವುದರ ಜತೆಗೆ ಮುಂದೊAದು ದಿನದಲ್ಲಿ ಜೀವನ ಪರಿಯಾಂತ ನೆನಪಿನಲ್ಲಿ ಉಳಿದುಕೊಳ್ಳುತ್ತದೆ ಎಂದು ಹೇಳಿದರು.
ಶಾಲೆಯ ವ್ಯವಸ್ಥಾಪ ನಿರ್ದೇಶಕ ಚೇತನ್.ಜೆ.ಎಸ್.ವೈ, ಶಾಲೆಯ ಪ್ರಾಂಶುಪಾಲೆ ವರ್ಷಿಣಿವಾಸು ಕಾರ್ಯಕ್ರಮದ ಬಗ್ಗೆ ಮತ್ತು ಮಕ್ಕಳು ಮಾಡಿದ್ದ ವಸ್ತು ಪ್ರದರ್ಶನಗಳ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸುವುದರ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊAಡರು.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಮಾಡುತ್ತಿದ್ದ ವಸ್ತು ಪ್ರದರ್ಶನದಲ್ಲಿ ಪ್ರಮುಖವಾಗಿ ಹೊರದೇಶ ಟರ್ಕಿಯಲ್ಲಿ ನಡೆದ ಪ್ರಕೃತಿ ವಿಕೋಪದಿಂದ ಆಗಿದ್ದ ಘಟನೆಯನ್ನು ಮಕ್ಕಳು ಪ್ರಾಯೋಗಿಕವಾಗಿ ನಡೆಸಿಕೊಟ್ಟರು, ಭೂಮಂಡಲದ ಬಗ್ಗೆ ಅರಿವು ಮತ್ತು ಕನ್ನಡ ನಾಡು ನುಡಿಯ ಬಗ್ಗೆ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ವಸ್ತು ಪ್ರದರ್ಶನ ಗಮನಸೆಳೆಯಿತು.
ಈ ವೇಳೆಯಲ್ಲಿ ಆಕಾಶ್ ಇಂಟರ್ ನ್ಯಾಷನಲ್ ಶಾಲೆಯ ಶಿಕ್ಷಕ ವೃಂಧ ಮತ್ತು ಪೋಷಕರು ಇದ್ದರು.
ಚಿತ್ರ: 25 ಡಿಹೆಚ್‌ಎಲ್ ಪಿ1
ದೇವನಹಳ್ಳಿ ಪಟ್ಟಣದ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಆಕಾಶ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿವಿಧ ವಿಷಯಗಳ ವಸ್ತುಪ್ರದರ್ಶನದಲ್ಲಿ ಪೋಷಕರು ಭಾಗವಹಿಸಿರುವುದು.

ಚಿತ್ರ: 25 ಡಿಹೆಚ್‌ಎಲ್ ಪಿ2
ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿನಿಯೊಬ್ಬರು ರಾಷ್ಟç ಕವಿಗಳ ಮತ್ತು ಭಾರತೀಯ ಮಹಾನ್ ಪುರುಷರ ಭಾವಚಿತ್ರಗಳನ್ನು ಅಂಟಿಸಿ ಪ್ರದರ್ಶನಕ್ಕಿಟ್ಟಿರುವುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments