Thursday, February 2, 2023
spot_img
HomeChikballapurBagepalliಬಡವರಿಗೆ, ನಿರ್ಗತಿಕರಿಗೆ ತಮ್ಮ ಕೈಲಾದ ಸಹಾಯ ಮಾಡಿ : ರಾಜಾರೆಡ್ಡಿ

ಬಡವರಿಗೆ, ನಿರ್ಗತಿಕರಿಗೆ ತಮ್ಮ ಕೈಲಾದ ಸಹಾಯ ಮಾಡಿ : ರಾಜಾರೆಡ್ಡಿ

ಪಾಲಾರ್ ಪತ್ರಿಕೆ | Palar Pathrike

ಬಾಗೇಪಲ್ಲಿ : ಜನ್ಮದಿನದಂದು ಅನಾವಶ್ಯಕವಾಗಿ ದುಂದುವೆಚ್ಚ ಮಾಡುವ ಬದಲು ಬಡವರಿಗೆ, ನಿರ್ಗತಿಕರಿಗೆ ನೆರವಾಗುವಂತಹ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಕರ್ನಾಟಕ ರಾಜ್ಯ ಜೆಡಿಎಸ್ ಯುವ ಬ್ರಿಗೇಡ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎನ್. ರಾಜಾರೆಡ್ಡಿ ತಿಳಿಸಿದರು.ಕರ್ನಾಟಕ ರಾಜ್ಯ ಜೆಡಿಎಸ್ ಯುವ ಬ್ರಿಗೇಡ್ ನ ರಾಜ್ಯಾಧ್ಯಕ್ಷ ಕೊಡ್ಲಗೆರೆ ಚಂದ್ರಶೇಖರ್ ರವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ವಿವಿಧ ಕಡೆ ಗುಡಿಸಲುಗಳಲ್ಲಿ ಸಿಹಿ ಹಂಚಿ, ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಚಂದ್ರಶೇಖರ್ ರವರುಕೊರೊನಾ ಲಾಕ್ ಡೌನ್ ಸಮಯದಲ್ಲಿ ಬಡವರಿಗೆ, ನಿರ್ಗತಿಕರಿಗೆ ಹಲವಾರು ರೀತಿಯಲ್ಲಿ ಸಹಾಯದ ಜೊತೆಗೆ ಕೊರೊನಾ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇವರ ಜನ್ಮದಿನದಂದು ಅನ್ನದಾನ ಕಾರ್ಯಕ್ರಮ ಮಾಡಿರುವುದು ಸಂತಸ ತಂದಿದೆ. ಯುವ ಪೀಳಿಗೆ ಮೋಜು ಮಸ್ತಿ ಎಂದು ಹಣವನ್ನು ದುಂದುವೆಚ್ಚ ಮಾಡದೇ ಬಡವರಿಗೆ, ನಿರ್ಗತಿಕರಿಗೆ ತಮ್ಮ ಕೈಲಾದ ಸಹಾಯ ಮಾಡಿ. ಮೋಜ ಮಸ್ತಿಗಳ ಹೆಸರಿನಲ್ಲಿ ನಾವು ಖರ್ಚು ಮಾಡುವ ಹಣ ಬಡವರೊಬ್ಬರ ಮನೆಯ ನಿರ್ವಹಣೆಗೆ ಸಹಾಯವಾಗುತ್ತದೆ. ದಯವಿಟ್ಟು ಯುವ ಪೀಳಿಗೆ ಬಡವರಿಗೆ, ನಿರ್ಗತಿಕರಿಗೆ ತಮ್ಮ ಕೈಲಾದ ಸಹಾಯ ಸಹಕಾರ ಮಾಡಿ. ಜನ್ಮದಿನಗಳು ಹೆಸರಿನಲ್ಲಿ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗಬೇಡಿ. ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡಿ, ಅವರಿಗೆ ಧೈರ್ಯ ತುಂಬಿ. ಮತ್ತೆ ಕರೋನ ಪ್ರಾರಂಭವಾಗುವ ಸೂಚನೆಗಳಿದ್ದು, ಜನರಲ್ಲಿ ಜಾಗೃತಿ ಮೂಡಿಸಿ, ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರರೆಡ್ಡಿ, ಮುದ್ದಲಪಲ್ಲಿ ವೆಂಕಿ, ಕೃಷ್ಣ, ರಮೇಶ್ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments