Thursday, March 30, 2023
spot_img
HomeChikballapurBagepalliಭಕ್ತಾದಿಗಳಿಗೆ ಉಚಿತವಾಗಿ 25 ಬಸ್ ಗಳ ವ್ಯವಸ್ಥೆ

ಭಕ್ತಾದಿಗಳಿಗೆ ಉಚಿತವಾಗಿ 25 ಬಸ್ ಗಳ ವ್ಯವಸ್ಥೆ

ಪಾಲಾರ್ ಪತ್ರಿಕೆ | Palar Pathrike

ಬಾಗೆಪಲ್ಲಿ: ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಹಾಗೂ ಸಮಾಜಸೇವಕರಾದ ಸಿ. ಮುನಿರಾಜುರವರು ತಮಿಳುನಾಡಿನ ಮೇಲ್ ಮರವತ್ತೂರ್ ನ ಓಂ ಶಕ್ತಿ ದೇವಸ್ಥಾನಕ್ಕೆ ಹೋಗಲು ಭಕ್ತಾದಿಗಳಿಗೆ ಉಚಿತವಾಗಿ ೨೫ ಬಸ್ ಗಳ ವ್ಯವಸ್ಥೆಯನ್ನು ಮಾಡಿ ಭಕ್ತಾದಿಗಳಿಗೆ ಶುಭ ಶುಭ ಹಾರೈಸಿದರು.
ಈ ವೇಳೆಯಲ್ಲಿ ಬಿಜೆಪಿ ಆಕಾಂಕ್ಷಿ ಸಿ. ಮುನಿರಾಜುರವರ ನೇತೃತ್ವದಲ್ಲಿ ಡಾ. ಎಚ್ .ಎನ್ ವೃತದಿಂದ ವಾದ್ಯ ಮೇಳಗಳೊಂದಿಗೆ ಭಕ್ತಾದಿಗಳು ಅರಿಕೆ, ಕಳಸಗಳನ್ನು ಹೊತ್ತು ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಹಳೆ ಎಸ್. ಬಿ .ಎಂ ರಸ್ತೆಯಲ್ಲಿರುವ ಓಂ ಶಕ್ತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಈ ಸಂರ‍್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಪ್ರತಾಪ್ ಮುಖಂಡರಾದ ಜಿನ್ನಿ. ವೆಂಕಟೇಶ್ ವೇಣುಗೋಪಾಲ್, ಪಾಚೇಪಲ್ಲಿ ನಾಗರಾಜ ರೆಡ್ಡಿ ಮುಂತಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments