Wednesday, November 22, 2023
spot_img
HomeChikballapurBagepalliನಾಳೆ ಮಡಿವಾಳ ಮಾಚಿದೇವರ ಜಯಂತಿ

ನಾಳೆ ಮಡಿವಾಳ ಮಾಚಿದೇವರ ಜಯಂತಿ

ಪಾಲಾರ್ ಪತ್ರಿಕೆ | Palar Pathrike

ಬಾಗೇಪಲ್ಲಿ: ಪಟ್ಟಣದ 3ನೇ ವಾರ್ಡಿನ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿರುವ ಮಡಿವಾಳ ಸಮುದಾಯಕ್ಕೆ ಸರ್ಕಾರ ನೀಡಿರುವ ಸ.ನಂ. 23ರಲ್ಲಿ 22 ಗುಂಟೆ ಜಮೀನು ನೀಡಿದ್ದು ,ಇದೇ ಸ್ಥಳದಲ್ಲಿ ಫೆ.1 ರ ಬುಧವಾರ ಬೆಳಗ್ಗೆ 10 ಘಂಟೆಗೆ ತಾಲ್ಲೂಕು ಮಡಿವಾಳ ಕ್ಷೇಮಾಭಿವೃದ್ದಿ ಟ್ರಸ್ಟ್ (ರಿ)ವತಿಯಿಂದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಮಡಿವಾಳ ಮಾಚಿದೇವರ ಸಂಘದ ರಾಜ್ಯ ಉಪಾಧ್ಯಕ್ಷ ಹೆಚ್.ವಿ.ನಾಗರಾಜ್ ತಿಳಿಸಿದ್ದಾರೆ.ಅವರು ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಮಡಿವಾಳ ಮಾಚಿದೇವರ ಚಿತ್ರಪಟದೊಂದಿಗೆ ಮೆರವಣಿಗೆ,ಭಜನೆ ಹಾಗೂ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದ್ದು,ಈ ಕಾರ್ಯಕ್ರಮಕ್ಕೆ ಶಾಸಕರು,ಸರ್ಕಾರಿ ಅಧಿಕಾರಿಗಳು,ಜಿಲ್ಲಾ ಮುಖಂಡರು ಭಾಗವಹಿಸುತ್ತಿರುವುದರಿಂದ   ತಾಲ್ಲೂಕಿನ ಸಮಸ್ತ ಮಡಿವಾಳ ಸಮಾಜದ ಬಂಧುಗಳು ಹಾಗೂ ಎಲ್ಲಾ ಸಮಾಜದ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ. 
ಈ ಪತ್ರಿಕಾಗೋಷ್ಟಿಯಲ್ಲಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಸುರೇಶ್, ಉಪಾಧ್ಯಕ್ಷ ಕ್ರಿಕೆಟ್ ಮೂರ್ತಿ, ಕಾರ್ಯದರ್ಶಿ ರಾಮನಪ್ಪ, ಗೂಳೂರು ಘಟಕದ ಉಪಾಧ್ಯಕ್ಷ ಶ್ರೀನಿವಾಸ್, ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments