Friday, April 19, 2024
spot_img
HomeKolarಹಿಂದುಳಿದ ವಿದ್ಯಾರ್ಥಿಗಳ ಕಲಿಕಾ ಅಂತರ ಕಡಿಮೆ ಮಾಡಲು ಲೀಡ್ ಯೋಜನೆ

ಹಿಂದುಳಿದ ವಿದ್ಯಾರ್ಥಿಗಳ ಕಲಿಕಾ ಅಂತರ ಕಡಿಮೆ ಮಾಡಲು ಲೀಡ್ ಯೋಜನೆ

ಕೋಲಾರ: ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿಕಳೆದ 20 ತಿಂಗಳಿನಿಂದ ಮಕ್ಕಳಿಗೆ ತರಗತಿಗಳು ನಿಯತವಾಗಿ ನಡೆಯದೇ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದ್ದು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಮುಖ ಎಜ್ಯುಟೆಕ್ ಕಂಪನಿಯಾದ ಲೀಡ್ ವಿಶೇಷ ಉಪಕ್ರಮ ಜಾರಿಗೊಳಿಸಿದೆ.
ಶಾಲಾ ಶಿಕ್ಷಣವನ್ನು ಕ್ರಾಂತಿಕಾರಕವಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಲೀಡ್, ಬಜೆಟ್ ಶಾಲೆಗಳಲ್ಲಿ ಕಲಿಯುತ್ತಿರುವ 12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಕೆಯ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಇದರ ಅನ್ವಯ ಪ್ರಸ್ತುತ ತನ್ನ ಇಂಟಿಗ್ರೇಟೆಡ್ ಲನಿರ್ಂಗ್ ಸಿಸ್ಟಮ್ ಮೂಲಕ ಕೋಲಾರ ಸೇರಿದಂತೆ ಕರ್ನಾಟಕದ ವಿವಿಧ ನಗರಗಳಾದ್ಯಂತ 172 ಶಾಲೆಗಳಲ್ಲಿ 68,600 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುತ್ತಿದೆ.
‘ಅಟ್ ಸ್ಕೂಲ್’ ಕಲಿಕಾ ಕಾರ್ಯಕ್ರಮವು ಶಿಕ್ಷಣಕ್ಕೆ ಪ್ರಮುಖವಾಗಿದೆ ಮತ್ತು ದೇಶದ 270 ಮಿಲಿಯನ್ ವಿದ್ಯಾರ್ಥಿಗಳ ‘ಕಲಿಕೆಯ ಫಲಿತಾಂಶಗಳ’ ಮೇಲೆ ಪರಿಣಾಮ ಬೀರಲು ಇದು ನಿರ್ಣಾಯಕ ಎನಿಸಿದೆ.
ಅಂತರರಾಷ್ಟ್ರೀಯ ಪಠ್ಯಕ್ರಮ, ಸ್ಮಾರ್ಟ್ ತರಗತಿ, ಲೀಡ್ ತಜ್ಞರಿಂದ ತರಬೇತಿ ಪಡೆದ ಸೂಪರ್ ಟೀಚರ್ಸ್, ಸ್ಟೂಡೆಂಟ್ ಅಪ್ಲಿಕೇಶನ್, ಮತ್ತು ಸಲೆಬ್ರಿಟಿ ಮಾಸ್ಟರ್‍ಕ್ಲಾಸ್‍ನಂಥ ವೈಶಿಷ್ಟ್ಯಗಳನ್ನು ಲೀಡ್ ಚಾಲಿತ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡಲಾಗುವುದು ಸಾಂಕ್ರಾಮಿಕ ರೋಗದ ನಡುವೆಯೂ, ಲೀಡ್ ಮಾಸ್ಟರ್‍ಕ್ಲಾಸ್ ಸರಣಿಯು ವಿದ್ಯಾರ್ಥಿಗಳಿಗೆ ಲೇಖಕ ಚೇತನ್ ಭಗತ್, ಟೆನಿಸ್ ಏಸ್ ಸಾನಿಯಾ ಮಿರ್ಜಾ ಮತ್ತು ಪ್ರಸಿದ್ಧ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳೊಂದಿಗೆ ಸಂವಹನ ನಡೆಸಲು ಮತ್ತು ಕಲಿಯಲು ಅವಕಾಶವನ್ನು ನೀಡಿದೆ ಎಂದು ಪ್ರಕಟಣೆ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments