Friday, April 19, 2024
spot_img
HomeChamarajanagarಸರ್ಕಾರಿ ನೌಕರರ ಸಂಘದಿAದ ಕೇಂದ್ರ ಮಾದರಿಯ ವೇತನ ಜಾರಿ, ಎನ್.ಪಿ.ಎಸ್ ರದ್ದು ಸಂಬAಧ ಪ್ರಸ್ತಾವನೆ ಮಂಡನೆ

ಸರ್ಕಾರಿ ನೌಕರರ ಸಂಘದಿAದ ಕೇಂದ್ರ ಮಾದರಿಯ ವೇತನ ಜಾರಿ, ಎನ್.ಪಿ.ಎಸ್ ರದ್ದು ಸಂಬAಧ ಪ್ರಸ್ತಾವನೆ ಮಂಡನೆ

ಚಾಮರಾಜನಗರ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 2022-23ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಹಾಗೂ ಪದಾಧಿಕಾರಿಗಳ ನಿಯೋಗವು ಭಾಗವಹಿಸಿ ಕೇಂದ್ರ ಮಾದರಿಯ ವೇತನ ಜಾರಿ ಹಾಗೂ ಎನ್.ಪಿ.ಎಸ್ ರದ್ದುಗೊಳಿಸುವ ಸಂಬAಧ ಅಂಕಿ ಅಂಶಗಳೊAದಿಗೆ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆಯನ್ನು ಮಂಡಿಸಿದರು.

ರಾಜ್ಯ ನೌಕರರಿಗೆ ಕೇಂದ್ರ ಮಾದರಿಯ ವೇತನ ಪರಿಷ್ಕರಣೆಗಾಗಿ ಅಧಿಕಾರಿಗಳ ವೇತನ ಸಮಿತಿ ರಚನೆ, ಇತ್ತೀಚೆಗೆ ರಾಜಸ್ಥಾನ ಸರ್ಕಾರವು ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಘೋಷಿಸಿದ್ದು ಅದರಂತೆ ಅಧ್ಯಯನ ನಡೆಸಿ ಓ.ಪಿ.ಎಸ್ ತರುವ ಕುರಿತು, ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ, ನೌಕರರ ಮೇಲಿನ ಹಲ್ಲೆಗಳನ್ನು ನಿಯಂತ್ರಿಸಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ತಂದು ಜಾಮೀನು ರಹಿತ ಬಂಧನದAತಹ ಕಠಿಣ ಕಾನೂನು ಜಾರಿ, ನೌಕರರ ತರಬೇತಿಗಾಗಿ ಜಿಲ್ಲಾ ತರಬೇತಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಮೂಲ ಸೌಕರ್ಯ ಕಲ್ಪಿಸಿ ಅನುಭವಿ ವಿಷಯ ತಜ್ಞರನ್ನು ನೇಮಿಸಿ ಪುನಶ್ಚೇತನಗೊಳಿಸುವ ಸಂಬAಧ ಪ್ರಸ್ತಾವನೆ ಮಂಡಿಸಲಾಯಿತು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments