Thursday, April 25, 2024
spot_img
HomeBangalore Ruralವಿವಿಧ ಬೇಡಿಕೆಗಳ ಆಗ್ರಹಿಸಿ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳ ಆಗ್ರಹಿಸಿ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ

ಪಾಲಾರ್ ಪಾತ್ರಿಕೆ | Palar Pathrike ದೇವನಹಳ್ಳಿ: ಗುತ್ತಿಗೆದಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ಗೆ ದೇವನಹಳ್ಳಿಯ ಗುತ್ತಿಗೆದಾರರು ಹೊರಡುವುದರ ಮೂಲಕ ಪ್ರತಿಭಟನೆಗೆ ಸಾಥ್ ನೀಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ದೇವನಹಳ್ಳಿ ಗುತ್ತಿಗೆದಾರರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಆದೇಶದ ಮೆರೆಗೆ ರಾಜ್ಯಮಟ್ಟದ ಪ್ರತಿಭಟನೆಗೆ ಭಾಗವಹಿಸಲು ತೆರಳುವುದರ ಮೂಲಕ ತಮ್ಮ 8 ಅಂಶಗಳನ್ನು ಒಳಗೊಂಡAತಹ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು. ರಾಜ್ಯಸರಕಾರ ಕೂಡಲೇ ಗುತ್ತಿಗೆದಾರರ ಸಂಕಷ್ಟಕ್ಕೆ ಸ್ಪಂಧಿಸಬೇಕೆAದು ಆಗ್ರಹಿಸಿದರು. ತಾಲೂಕು ಸಂಘಟನಾ ಕಾರ್ಯದರ್ಶಿ ನವೀನ್‌ಕುಮಾರ್ ಮಾತನಾಡಿ, ರಾಜ್ಯ ಗುತ್ತಿದಾರರ ಸಂಘದ ಸಂಘಟನೆಯಿAದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ದೇವನಹಳ್ಳಿ ತಾಲೂಕಿನ ಗುತ್ತಿಗೆದಾರರು ಒಗ್ಗೂಡಿ ಭಾಗವಹಿಸಲು ಹೊರಡಲಾಗಿದೆ. ನಮ್ಮ ಪ್ರಮುಖ ಬೇಡಿಕೆಗಳನ್ನು ಕೂಡಲೇ ರಾಜ್ಯಸರಕಾರ ಪರಿಗಣಿಸಿ, ಈಡೇರಿಸುವಂತೆ ಆಗಬೇಕು ಎಂದು ಆಗ್ರಹಿಸಿದರು. ಪ್ರಮುಖ ಬೇಡಿಕೆಗಳು: ಭ್ರಷ್ಟಾಚಾರ, ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಆಗಬೇಕು. ಗುತ್ತಿಗೆದರರ ಬಾಕಿ ಬಿಲ್ಲುಗಳನ್ನು ಕೂಡಲೇ ಪಾವತಿಸಬೇಕು. ಪ್ಯಾಕೇಜ್ ಪದ್ದತಿಯನ್ನು ರದ್ದುಪಡಿಸಬೇಕು. ಹೆಚ್ಚುವರಿ ಜಿಎಸ್‌ಟಿ ಮೊತ್ತ ಸರಕಾರ ಭರಿಸಬೇಕು. ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಯನ್ನು ನೀಡಬೇಕು. ಜೇಷ್ಟತೆ ಆಧಾರದಲ್ಲಿ ಬಿಲ್ ಪಾವತಿಸಬೇಕು. ಕೆಟಿಟಿಪಿ ಕಾಯ್ದೆಯ ಪ್ರಮಾರ ಟೆಂಡರ್ ಆಹ್ವಾನಿಸಬೇಕು. ಅನುದಾನ ಆಧರಿಸಿ ಟೆಂಡರ್ ಆಹ್ವಾನಿಸಬೇಕು ಎಂಬ 8 ಅಂಶಗಳ ಪ್ರಮುಖ ಬೇಡಿಕೆಗಳು ಸರಕಾರಕ್ಕೆ ಒತ್ತಾಯಿಸಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಸುಬ್ರಮಣಿ, ಗುತ್ತಿಗೆದಾರರಾದ ಗಿರಿಶ್, ಮಂಜುನಾಥ್, ಸಿದ್ದಪ್ಪ, ನವೀನ್‌ಕುಮಾರ್, ಚನ್ನಕೇಶವ, ಸತಿಶ್, ಚಿಕ್ಕಣ್ಣ, ಗೋಪಿ, ಲಕ್ಷö್ಮಣ್, ಅಶೋಕ್, ಶ್ರೀನಿವಾಸ್ ಹಾಗೂ ಸಂಘದ ಗೌರವಾಧ್ಯಕ್ಷ ಗೋಪಾಲಪ್ಪ, ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments