Tuesday, April 23, 2024
spot_img
HomeTumkurರಾಷ್ಟಿçÃಯ ವಿಜ್ಞಾನ ದಿನಾಚರಣೆ

ರಾಷ್ಟಿçÃಯ ವಿಜ್ಞಾನ ದಿನಾಚರಣೆ

ತುಮಕೂರು: ನಗರದ ಉಪ್ಪಾರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶೇಷಾದ್ರಿಪುರಂ ಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ಸರ್ಕಾರ ವಿಜ್ಞಾನ ತಂತ್ರಜ್ಞಾನ ಇಲಾಖೆ ಮತ್ತು ಕರಾವಿಪ ಜಿಲ್ಲಾ ಸಮಿತಿ ಹಾಗೂ ಶೇಷಾದ್ರಿಪುರಂ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟಿçÃಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ತುಮಕೂರು ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು ಭೌತಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವೀರಭದ್ರಯ್ಯ ಮಾತನಾಡಿ ಸಮಸ್ಯೆಯನ್ನು ಮೀರಿ ಬೆಳೆಯಬೇಕು ಉತ್ತಮ ಸಾಧಕರ ಜೀವನ ಚರಿತ್ರೆಯನ್ನು ಓದಿ ವಿದ್ಯಾರ್ಥಿಗಳು ಪ್ರೇರಣೆಯನ್ನು ಪಡೆಯಬೇಕು ಎಂದು ನೈತಿಕ ಮೌಲ್ಯಗಳನ್ನು ತಿಳಿಸಿದರು.

ಕರಾವಿಪ ಸಮಿತಿ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚಿನ ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಹೇಳಿದರು.

ಕರಾವಿಪ ಸಮಿತಿ ಅಧ್ಯಕ್ಷ ಡಾಕ್ಟರ್ ಸಂಜಯ್ ನಾಯಕ ಮಾತನಾಡಿ ಪ್ರತಿಯೊಬ್ಬರೂ ಆರೋಗ್ಯದಲ್ಲಿ ಸಮತೋಲನ ಆಹಾರ ಪದ್ಧತಿಗಳನ್ನು ರೂಢಿಸಿಕೊಳ್ಳಿ ವಿಜ್ಞಾನ ಮನೋಭಾವನೆಯನ್ನುರೂಡಿಸಿಕೊಳ್ಳಲು ತಿಳಿಸಿದರು.

ಪ್ರಬಂಧ ಸ್ಪರ್ಧೆ ಹಾಗೂ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಾಂಶುಪಾಲರಾದ ನಂದರಾಜರವರು ಮಾತನಾಡಿ ವೈಜ್ಞಾನಿಕ ತಂತ್ರಜ್ಞಾನಗಳ ಬೆಳವಣಿಗೆ ಅವುಗಳ ಸಂಶೋಧನೆಯಿAದ ನಮಗೆ ಅನುಕೂಲಗಳು ಎಷ್ಟಿದೆ ಎಂಬುದರ ಬಗ್ಗೆ ತಿಳಿಸಿದರು ಹಾಗೂ ಅಧ್ಯಯನದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.

ಗುರುಮೂರ್ತಿ, ಉಪಾಧ್ಯಕ್ಷರು, ಕರಾವಿಪ., ತುಮಕೂರು ಜಿಲ್ಲಾ ಸಮಿತಿ. ಪಿ.ಮೂರ್ತಿ, ಉಪಾಧ್ಯಕ್ಷರು, ಕರಾವಿಪ., ತುಮಕೂರು ಜಿಲ್ಲಾ ಸಮಿತಿ. ಶಂಕರ್. ಖಜಾಂಚಿಗಳು, ಕರಾವಿಪ., ತುಮಕೂರು ಜಿಲ್ಲಾ ಸಮಿತಿ ಇವರುಗಳು ಉಪಸ್ಥಿತರಿದ್ದರು ರಶ್ಮಿ ಬಿ.ಎನ್. ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಪುನೀತ್ ರವರು ಸ್ವಾಗತಿಸಿದರು, ಪ್ರವೀಣ್ ಕುಮಾರ್ ಪಿ.ಎಸ್. ಅವರು ವಂದನಾರ್ಪಣೆ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments