Friday, April 19, 2024
spot_img
HomeRamnagarರಕ್ಷಣಾ ಕಲೆಗಳು ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಜವರೇಗೌಡ ಟಿ

ರಕ್ಷಣಾ ಕಲೆಗಳು ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಜವರೇಗೌಡ ಟಿ

ರಾಮನಗರ: ಹೆಣ್ಣು ಮಕ್ಕಳು ಇಂದು ಎಲ್ಲಾ ರಂಗದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾಭ್ಯಾಸ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿ ಹೆಣ್ಣು ಮಕ್ಕಳು ನಿರ್ಭೀತಿ ಹಾಗೂ ಆತ್ಮವಿಶ್ವಾಸದಿಂದ ಕೆಲಸ ಮಾಡಲು ರಕ್ಷಣಾ ಕಲೆಗಳು ಅವಶ್ಯಕ ಎಂದು ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ ಅವರು ತಿಳಿಸಿದರು

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ಆಯೋಜಿಸಲಾಗಿದ್ದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳ ಮತ್ತು ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿನಿಯರಿಗೆ “ಓಬವ್ವ ಆತ್ಮ ರಕ್ಷಣಾ ಕಲೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಓಬವ್ವ ಆತ್ಮ ರಕ್ಷಣಾ ಕಲೆಯ ಕೌಶಲ್ಯಗಳ ತರಬೇತಿ ಯೋಜನೆಯಡಿ ರಾಜ್ಯದಲ್ಲಿ ೧ ಲಕ್ಷ ೮೨ ಸಾವಿರ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತಿದೆ. ರಕ್ಷಣಾ ಕಲೆಗಳು ಹೆಣ್ಣು ಮಕ್ಕಳಿಗೆ ದೈರ್ಯ ತುಂಬುವುದರ ಜೊತೆಗೆ ಅವರಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹಾಯಕವಾಗುತ್ತದೆ ಎಂದರು.

ಮಕ್ಕಳಲ್ಲಿ ನಗು, ಮಂದಹಾಸ ಹಾಗೂ ಮುಗ್ದತೆ ಇರುತ್ತದೆ. ಇದು ನಿರಂತರವಾಗಿ ಯೌವನದಲ್ಲೂ ಉಳಿಯಬೇಕಾದರೆ, ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾಭ್ಯಾಸದ ಹಂತದಲ್ಲೇ ವಿದ್ಯಾರ್ಥಿಗಳು ಗುರಿ ನಿಗಧಿಪಡಿಸಿಕೊಂಡು ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಕನಸುಗಳನ್ನು ನನಸು ಮಾಡಲು ಹಗಲಿರುಳು ಕಷ್ಟ ಪಡಬೇಕು ಎಂದರು.

ಪ್ರತಿಭೆ ಎಂಬುದು ದೈವದಾತ್ತವಾಗಿ ಬರುವುದಿಲ್ಲ, ಸತತ ಪರಿಶ್ರಮದಿಂದ ದೊರೆಯುತ್ತದೆ. ಸಂಶೋಧನೆ / ಆವಿಷ್ಕಾರಗಳು ಆಕಸ್ಮಿಕವಲ್ಲ ನಿರಂತರ ಪರಿಶ್ರಮದ ಫಲ. ಮಹಾನ್ ವ್ಯಕ್ತಿಗಳು ಗುರಿ ಸಾಧಿಸಲು ನಿರಂತರವಾಗಿ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ.  ಯಶಸ್ಸಿನ ಮೂರು ಮಂತ್ರಗಳೆAದರೆ ಗುರಿ, ಜ್ಞಾನ ಸಂಪಾದನೆ, ಪರಿಶ್ರಮ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ರಾಮನಗರ ನಗರಸಭೆ ಅಧ್ಯಕ್ಷೆ ಬಿ.ಸಿ ಪಾರ್ವತಮ್ಮ ಅವರು ಮಾತನಾಡಿ ಕರ್ನಾಟಕ ಸರ್ಕಾರವು ಹೆಣ್ಣು ಮಕ್ಕಳ ಮುಂದಿನ ಭವಿಷ್ಯಕ್ಕಾಗಿ “ಓಬವ್ವ ಆತ್ಮ ರಕ್ಷಣಾ ಕಲೆ” ತರಬೇತಿ ನೀಡುತ್ತಿದೆ. ಸಮಾಜದಲ್ಲಿ ದಿನ ನಿತ್ಯ ನಡೆಯುತ್ತಿರುವ ಮಹಿಳಾ ದೌರ್ಜನ್ಯವನ್ನು ತಡೆಯಲು ತರಬೇತಿ ಅವಶ್ಯಕ. ಜೀವನದ ಹಲವಾರು ಸಂದರ್ಭದಲ್ಲಿ ಹೆಣ್ಣು ಮಕ್ಕಳು  ಗುರಿಯನ್ನು ಸಾಧಿಸಬೇಕಾದರೆ ಏಕಾಂಗಿಯಾಗಿ ಹೋರಾಡಬೇಕು. ಏಕಾಂಗಿ ಆದ ಸಂದರ್ಭದಲ್ಲೂ ಹಿಂದೆ ಸರಿಯದೇ ಆತ್ಮಬಲ ಹೆಚ್ಚಿಸಿಕೊಂಡು ಗುರಿ ಮುಟ್ಟಿ ಎಂದರು.

ಕಾರ್ಯಕ್ರಮದಲ್ಲಿ ಮಾಯಾಗನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಲಲಿತಾ ಬಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶಿವಪ್ರಿಯಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಆಧ್ಯಕ್ಷ ಸತೀಶ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜೈ ಪ್ರಕಾಶ್, ಕುಮಾರ್ ಸ್ವಾಮಿ, ಸರೋಜಮ್ಮ, ಜಿಲ್ಲಾ ಸಮನ್ವಯಾಧಿಕಾರಿ ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಸಿದ್ಧರಾಜು, ರವಿ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್. ಎಚ್, ಕರಾಟೆ ತರಬೇತುದಾರ ರಾದ ಶ್ರೀನಿವಾಸ್ ಹಾಗೂ ಪುಷ್ಪವತಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments