Thursday, April 25, 2024
spot_img
HomeChikballapurBagepalliಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ 21 ಅಡಿ ಶಿವನ ಪ್ರತಿಮೆಯನ್ನು ಸ್ಥಾಪನೆಗೆ ಶಂಕುಸ್ಥಾಪನೆ

ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ 21 ಅಡಿ ಶಿವನ ಪ್ರತಿಮೆಯನ್ನು ಸ್ಥಾಪನೆಗೆ ಶಂಕುಸ್ಥಾಪನೆ

ಬಾಗೇಪಲ್ಲಿ: ಮಹಾಶಿವರಾತ್ರಿ ಇನ್ನೇನು ಹತ್ತಿರವಾಗ್ತಿದೆ. ಈಶ್ವರನ ಆರಾಧನೆಗೆ ಭಕ್ತಾದಿಗಳು ಸಿದ್ಧರಾಗುತ್ತಿದ್ದಾರೆ. ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಹಾಗೂ ಬಾಗೇಪಲ್ಲಿ ತಾಲ್ಲೂಕು ಚಿತ್ರಾವತಿ ಸ್ಪೋರ್ಟ್ಸ್ ಕ್ಲಬ್ ಹಾಗೂ ದಾನಿಗಳ ನೆರವಿನಿಂದ 21 ಅಡಿ ಶಿವನ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದ್ದು  ಶಂಕುಸ್ಥಾಪನೆಯನ್ನು ಮಾಡಲಾಯಿತು.ಬಾಗೇಪಲ್ಲಿ ಹಿರಿಯ ಮುಖಂಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹ ನಾಯ್ಡು ಮಾತನಾಡಿಈ ಬಾರಿಯ ಶಿವರಾತ್ರಿ ಹಬ್ಬದಂದು 21 ಅಡಿ ಶಿವನ ಪ್ರತಿಮೆಯನ್ನು  ಇದೇ ಮೊದಲ ಬಾರಿಗೆ ವಿಶೇಷವಾಗಿ ಬಾಗೇಪಲ್ಲಿ ಮಹಾಶಿವರಾತ್ರಿ ಅಂಗವಾಗಿ 21 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ಸಿದ್ಧತೆ ಕೂಡ ನಡೆದಿದ್ದು,
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಾರ್ಚ್‌ 1ರಿಂದ  ಒಂದು ವಾರದ ಕಾಲ ಪ್ರದರ್ಶನಗೊಳ್ಳಲಿದೆ. ಗೂಳೂರು ಖ್ಯಾತ  ಲೋಕನಾಥಾಚಾರಿ  ಕಲಾವಿದರಿಂದ ಶಿವನ ಪ್ರತಿಮೆ ನಿರ್ಮಾಣವಾಗುತ್ತಿದೆ. ಶಿವನ ಪ್ರತಿಮೆ ಸುಮಾರು 3 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದಿ ಹೇಳಿದರು .
ಈ ಸಂದರ್ಭದಲ್ಲಿ ಆರಕ್ಷಕ ಉಪ ನಿರೀಕ್ಷಕ ಗೋಪಾಲ ರೆಡ್ಡಿ, ಬಾಗೇಪಲ್ಲಿ ಚಿತ್ರಾವತಿ ಸ್ಪೋರ್ಟ್ಸ್ ಕ್ಲಬ್ ಮುಖ್ಯಸ್ಥರಾದ ರಮೇಶ್ ಕುಮಾರ್ ಜಯಸಿಂಹಾ ರೆಡ್ಡಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಿ.ವಿ.ವೆಂಕಟರವಣ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments