Friday, April 19, 2024
spot_img
HomeChikballapurಗ್ರಾಮ ಪಂಚಾಯಿತಿಯ ಬೀಗ ಹೊಡೆದು ಯುಪಿಎಸ್ ಬ್ಯಾಟರಿಗಳ ಕಳ್ಳತನ

ಗ್ರಾಮ ಪಂಚಾಯಿತಿಯ ಬೀಗ ಹೊಡೆದು ಯುಪಿಎಸ್ ಬ್ಯಾಟರಿಗಳ ಕಳ್ಳತನ

ಶಿಡ್ಲಘಟ್ಟ: ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ    ಸಿಸಿ ಟಿವಿ ಕ್ಯಾಮೆರಾ ತಂತಿಗಳನ್ನು ಕಡಿತಗೊಳಿಸಿ ಕಚೇರಿಯ ಬೀಗ ಹೊಡೆದು ಕಳ್ಳತನ ವಾಗಿರುವ ಘಟನೆ ನಡೆದಿದೆ.
ತಾಲೂಕಿನ ಮಳ್ಳೂರು ಗ್ರಾಮದ ಹೊರವಲಯದ ವಿಜಯಪುರ ರಸ್ತೆಯಲ್ಲಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯದ ಹೊರಗಡೆ ಇರುವ ಸಿಸಿ ಕ್ಯಾಮರಾ   ವೈರ್ ಗಳನ್ನು ಕಡಿತಗೊಳಿಸಿ, ಕಚೇರಿಗೆ ಹಾಕಿದ್ದ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದ್ದು, ಇನ್ನೂ ಕಚೇರಿ ಒಳಗಡೆ ಇದ್ದ ಸಿಸಿ ಟಿವಿ ಡಿವಿಆರ್, ಎರಡು ಯುಪಿಎಸ್ ಬ್ಯಾಟರಿಗಳು ಸೇರಿದಂತೆ ಇನ್ ವೈಟರ್  ಕಳ್ಳತನವಾದೆ ಎಂದು ಪಿಡಿಒ ಮಮತಾ ಮಾಹಿತಿ ನೀಡಿದ್ದಾರೆ.  ಬುಧವಾರ ತಡರಾತ್ರಿ ಘಟನೆ ನಡೆದಿದ್ದು ,ಕಳ್ಳರು ಯುಪಿಎಸ್ ಬ್ಯಾಟರಿಗಳನ್ನು ದೋಚಿ ಪರಾರಿಯಾಗಿದ್ದಾರೆ.ಗುರುವಾರ ಬೆಳ್ಳಗೆ  ಆರು ಗಂಟೆ ಸುಮಾರಿಗೆ ಎಂದಿನಂತೆ ಗ್ರಾಮಪಂಚಾಯಿತಿ ಯ ಜವಾನ ಕಾರ್ಯಾಲಯದ ಬೀಗ ತೆರೆಯಲು ಹೋದಾಗ ಘಟನೆ ನಡೆದಿರುವುದು ಗೋಚರವಾಗಿದೆ.


ಕಳ್ಳತನವಾಗಿರುವ ಬಗ್ಗೆ ಪಿಡಿಒ ಮಮತಾ ರವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments