Friday, March 29, 2024
spot_img
HomeRamnagarಪೌರ ಕರ್ಮಿಕರ ಆರೋಗ್ಯದ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿ :ಮಂಜುನಾಥ್

ಪೌರ ಕರ್ಮಿಕರ ಆರೋಗ್ಯದ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿ :ಮಂಜುನಾಥ್

ರಾಮನಗರ: ಮ್ಯಾನುಯಲ್ ಸ್ಕ್ಯಾವೆಂಜರ್ ಹಾಗೂ ಪೌರ ಕಾರ್ಮಿಕರ ಆರೋಗ್ಯದ  ಬಗ್ಗೆ   ನಿಗಾ ವಹಿಸುವಂತೆ ರಾಮನಗರ ತಾಲ್ಲೂಕು ಉಪವಿಭಾಗಾಧಿಕಾರಿ ಮಂಜುನಾಥ್ ಅವರು ತಿಳಿಸಿದರು.
ಅವರು ಇಂದು ಸಮಾಜ  ಕಲ್ಯಾಣ  ಇಲಾಖೆ ವತಿಯಿಂದ  ಆಯೋಜಿಸಲಾಗಿದ್ದ ಮ್ಯಾನುಯಲ್ ಸ್ಕಾವೆಂಜರ್ ನೇಮಕಾತಿ  ನಿಷೇಧ ಮತ್ತು ಅವರ ಪುನರ್ವಸತಿ  ಅದಿನಿಯಮ ೨೦೧೩ ರಡಿ ನಿಯಮ  ೨೪(೩)  ಉಪವಿಭಾಗ  ಮಟ್ಟದ  ಜಾಗೃತ  ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಚ್ಛತಾ ಕಾರ್ಮಿಕರು  ಕೆಲಸದ ಸಂದರ್ಭದಲ್ಲಿ  ಆರೋಗ್ಯ ರಕ್ಷಿಸಿಕೊಳ್ಳಲು ಬೇಕಾದ ಪರಿಕರಗಳನ್ನು  ಕಡ್ಡಾಯವಾಗಿ ಬಳಸಬೇಕು. ಇಲಾಖಾ ಅಧಿಕಾರಿಗಳು ರಕ್ಷಣಾ  ಪರಿಕರಗಳನ್ನು ಬಳಸುವ ಅನುಕೂಲತೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಗ್ರಾಮೀಣ ಮತ್ತು ನಗರ ಭಾಗದ ಪೌರಾಕಾರ್ಮಿಕರಿಗೆ, ಸ್ವಚ್ಛತಾ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ  ಸೌಲಭ್ಯ ಮತ್ತು  ಕನಿಷ್ಟ ವೇತನ  ಸರಿಯಾದ  ರೀತಿಯಲ್ಲಿ ಒದಗಿಸುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮ್ಯಾನುಯಲ್ ಸ್ಕಾವೆಂಜರ್ ಜಾಗೃತ  ಸಮಿತಿ ಸದಸ್ಯ ನಾಗರಾಜು ಅವರು ಮಾತನಾಡಿ  ಪೌರಕಾರ್ಮಿಕರು ಪ್ರತಿ ನಿತ್ಯ ಬೆಳಿಗ್ಗೆ ಸ್ವಚ್ಛತಾ ಕೆಲಸದಲ್ಲಿ ತೊಡಗುತ್ತಿದ್ದು, SಖಿP ಘಟಕದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ವೇತನದಲ್ಲಿ ಕಡಿತಗೊಳ್ಳುವ ಇಎಸ್‌ಐ, ಪಿಎಫ್  ವೈದ್ಯಕೀಯ ಸೌಲಭ್ಯಗಳು  ಸರಿಯಾದ ರೀತಿಯಲ್ಲಿ ಸಿಗುವಂತೆ ಮಾಡಬೇಕು  ಎಂದರು.
ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ, ಕುಡಿಯುವ ನೀರು, ಶೌಚಗೃಹ, ಪ್ರಥಮ ಚಿಕಿತ್ಸೆ, ಶುಚಿತ್ವ ಸೌಲಭ್ಯ, ಸಮವಸ್ತ್ರ, ಹ್ಯಾಂಡ್ ಗ್ಲ್ವಸ್, ಟೋಪಿ, ರಬ್ಬರ್ ಶೂಗಳು, ಪಾದರಕ್ಷೆ, ಶುಚಿಗೊಳಿಸುವ ಸಾಧನ, ಪೊರಕೆ , ಮಾಸ್ಕ್, ಕೊಳೆ ತೆಗೆಯುವ ಯಂತ್ರ, ಚರಂಡಿ ಶುಚಿಗೊಳಿಸುವ ಉಪಕರಣ, ಬಿದಿರಿನ ಬುಟ್ಟಿಗಳು, ತ್ಯಾಜ್ಯ ಸಾಗಾಣೆ ತಳ್ಳು ಬಂಡಿ, ಫಿನಾಯಲ್ ಹಾಗೂ ಬ್ಲೀಚಿಂಗ್ ಪೌಡರ್ ಸೇರಿ ಇತರೆ ಪರಿಕರ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಪೌರ ಕಾರ್ಮಿಕರಿಗೆ   ಸಾಮಾನ್ಯ ಆರೋಗ್ಯ ತಪಾಸಣೆ  ಮಾಡುವುದು, ಸ್ವಚ್ಛತಾ ಯಂತ್ರಗಳ  ಕುರಿತು ತರಬೇತಿ ,ಪೌರ ಕಾರ್ಮಿಕರು ಇಲಾಖೆಗಳಿಂದ ಯಾವ ಯಾವ ಸೌಲಭ್ಯ ಪಡೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ಒದಗಿಸಬೇಕು ಎಂದರು.
ನಿವೇಶನ, ವಸತಿ ರಹಿತ ಪೌರ ಕಾರ್ಮಿಕರಿಗೆ ವಸತಿ ಒದಗಿಸುವ ಕೆಲಸ ಮಾಡಿಕೊಡುವಂತೆ ಮನವಿ ಮಾಡಿದರು..
ಸಭೆಯಲ್ಲಿ ರಾಮನಗರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಣಾಧಿಕಾರಿ ಶಿವಕುಮಾರ್, ಮಾಗಡಿ ಸಮಾಜ  ಕಲ್ಯಾಣ ಇಲಾಖೆ ಸಹಾಯಕ  ನಿರ್ದೇಶಕ  ಕುಮಾರಸ್ವಾಮಿ, ಕನಕಪುರ ತಾಲ್ಲೂಕಿನ ಜಯಪ್ರಕಾಶ್, ರಾಮನಗರ  ತಾಲ್ಲೂಕಿನ  ಕುಮಾರ್ ಸುಬ್ರಮಣ್ಯ ಚನ್ನಪಟ್ಟಣ  ತಾಲ್ಲೂಕಿನ ಸರೋಜಮ್ಮ ವಿವಿಧ  ಇಲಾಖೆ ಅಧಿಕಾರಿಗಳು ಹಾಜರಿದ್ದರು 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments