Tuesday, April 23, 2024
spot_img
HomeRamnagarನರೇಗಾ ಯೋಜನೆಯಡಿ ವ್ಯಯಕ್ತಿಕ ಕಾಮಗಾರಿಗಳ ಪರಿಶೀಲನೆ: ಡಾ.ಜಿ.ವಿ. ಕೃಷ್ಣ ಲೋಹಿ ದಾಸ್

ನರೇಗಾ ಯೋಜನೆಯಡಿ ವ್ಯಯಕ್ತಿಕ ಕಾಮಗಾರಿಗಳ ಪರಿಶೀಲನೆ: ಡಾ.ಜಿ.ವಿ. ಕೃಷ್ಣ ಲೋಹಿ ದಾಸ್

ರಾಮನಗರ: ಗ್ರಾಮೀಣ ಪ್ರದೇಶದಲ್ಲಿ ಸುಮಾರು  ೭೦% ರೈತ ವಗ೯  ಇದ್ದರು  ಸಹ  ನಗರ ಪ್ರದೇಶದಲ್ಲಿ ಕೆಲಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೇ , ಗ್ರಾಮೀಣ ಪ್ರದೇಶದ ಜನರು  ಸರ್ಕಾರ ರೂಪಿಸಿರುವ  ನರೇಗಾ ಯೋಜನೆಯನ್ನು ಉಪಯೋಗಿಸಿ ಕೆಲಸ ಮಾಡಿ ತಾವು ವಾಸಿಸುವ ಗ್ರಾಮೀಣ ಪ್ರದೇಶವನ್ನು  ಅಭಿವೃದ್ಧಿ ಪಡಿಸಬೇಕು ಎಂದು   ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಓIಖಆPಖ- ಕಾರ್ಯಕ್ರಮ ನಿರ್ದೇಶಕರಾದ ಡಾ.ಜಿ.ವಿ.  ಕೃಷ್ಣ ಲೋಹಿ ದಾಸ್ ಅವರು ತಿಳಿಸಿದರು.
ಅವರು ಇಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮುದಗೆರೆ ಗ್ರಾಮ ಪಂಚಾಯತಿಗೆ  ಇಂದು ಬೇಟಿ ನೀಡಿ  ೨೦೧೫-೧೬ ರಿಂದ ೨೦೧೮-೧೯ ರ ಸಾಲಿನವರೆಗೆ ಮನರೇಗಾ ಯೋಜನೆಯಡಿ ಅನುಷ್ಠಾನವಾಗಿರುವ ವ್ಯಯಕ್ತಿಕ ಕಾಮಗಾರಿಗಳ ಸಂಬAಧ ಫಲಾನುಭವಿ ಗುಂಪಿಗಳೊAದಿಗೆ ಚಚೆ೯ ಮಾಡಿ  ಯೊಜನೆಯಿಂದ ಆದ ಉಪಯೋಗದ ಬಗ್ಗೆ ಮಾಹಿತಿ ಪಡೆದರು.
ನಂತರ ಮಾತನಾಡಿ ಗ್ರಾಮೋಣ ಪ್ರದೇಶದ ಬಗ್ಗೆ ಯುವ ಜನತೆಗೆ ಇರುವ ದೋರಣಾ  ಮನೋಸ್ಥಿತಿ ಕಡಿಮೆಯಾಗಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರ ರೂಪಿಸುವ   ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡರೆ ನಗರ ಪ್ರದೇಶಕ್ಕೆ ಸಮನಾಗಿ ಗ್ರಾಮೀಣ ಪ್ರದೇಶ ಸಹ ಅಭಿವೃದ್ಧಿ ಗೊಳ್ಳಲಿದೆ  ಎಂದರು.
ಗ್ರಾಮದ ಜನರು ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಸರ್ಕಾರಿ ಯೋಜನೆಗಳ ಬಗ್ಗೆ  ಎಲ್ಲರಿಗೂ ತಿಳಿಸುವ ಮೂಲಕ ಉತ್ತಮ ಫಲಾನುಭವಿ ಗಳೂ ಸದ್ಬಳಕೆ  ಮಾಡಿಕೊಂಡಾಗ ಮಾತ್ರ ಸಕಾ೯ರದ ಯೋಜನಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದರು
ಮನರೇಗಾ ವ್ಯಯಕ್ತಿಕ ಕಾಮಗಾರಿಗಳ ಬಗ್ಗೆ ಮನೆ ಮನೆ ಬೇಟಿ ನೀಡಿ ಸವೆ೯  ಮಾಡುವುದರ ಮೂಲಕ ಮಾಹಿತಿ ಪಡೆದರು.ಇಲ್ಲಿ ನಡೆದಿರುವ ವೈಯಕ್ತಿಕ ಕಾಮಗಾರಿಗಳು ರಾಜ್ಯ/ ರಾಷ್ಟ್ರಕ್ಕೆ ಮಾದರಿ ಎಂದರು.
ಈ ಸಂದರ್ಭದಲ್ಲಿ  ತಾಲ್ಲೂಕು ಕಾರ್ಯನಿರ್ವಕಾಧಿಕಾರಿ ಚಂದ್ರು,ತಾಲ್ಲೂಕು ಸಹಾಯಕ ನಿರ್ದೇಶಕರು ಲೋಕೇಶ್ , ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೀಮಪ್ಪ  ,  ಎನ್.ಆರ್.ಎಲ್.ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿನೋದ್ ಕುಮಾರ್. , ತಾ.ಪಂ. ಐಇಸಿ ಸಂಯೋಜಕಿ ಭವ್ಯ  ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಇನ್ನಿತರ ಅಧಿಕಾರಿಗಳು ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments