Friday, April 19, 2024
spot_img
HomeChikballapurತಲಕಾಯಲಬೆಟ್ಟದ ಭೂನೀಳಾ ಸಮೇತ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ

ತಲಕಾಯಲಬೆಟ್ಟದ ಭೂನೀಳಾ ಸಮೇತ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ

ಶಿಡ್ಲಘಟ್ಟ: ಇತಿಹಾಸ ಪ್ರಸಿದ್ಧ ತಲಕಾಯಲಬೆಟ್ಟದ ಭೂನೀಳಾ ಸಮೇತ  ಶ್ರೀ  ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಶ್ರದ್ದಾ ಭಕ್ತಿ ಗಳಿಂದ ಆಚರಿಸಲಾಯಿತು.ತಹಶಿಲ್ದಾರ್ ರಾಜೀವ್ ಮತ್ತು ಶಾಸಕ ವಿ ಮುನಿಯಪ್ಪರವರು ರಥಕ್ಕೆ ಚಾಲನೆ ನೀಡಿದರು.
ಬ್ರಹ್ಮರಥೋತ್ಸವಕ್ಕೆ ಬಂದಿರುವಂತಹ ಭಕ್ತಾದಿಗಳಿಗೆ ಕಾಂಗ್ರೆಸ್ ಮುಖಂಡರುಗಳಾದ ಎಬಿಡಿ ರಾಜೀವ್ ಗೌಡ ಮತ್ತು ಎಚ್ಎ ಎಲ್ ದೇವರಾಜ್ ರವರ ಕಡೆಯಿಂದ ಅನ್ನ ಸಂತರ್ಪಣೆ ಮಾಡಿದರುಜಿಲ್ಲೆಯ ನಾನಾ ಕಡೆಗಳಿಂದ  ಆಗಮಿಸಿದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಶಾಸಕ ವಿ ಮುನಿಯಪ್ಪ ಮಾತನಾಡಿ ಇತಿಹಾಸ ಪ್ರಸಿದ್ಧ ತಲಕಾಯಲಬೆಟ್ಟದ ಜಾತ್ರೆ ಸಾವಿರಾರು ವರ್ಷಗಳ ಚರಿತ್ರೆ ಹೊಂದಿದೆ .  ಭಕ್ತಿ ಯಿಂದ ಜನರು ರಥೋತ್ಸವದಲ್ಲಿ ಪಾಲ್ಗೊಂಡು  ಯಶಸ್ವಿಗೊಳಿಸಿದ್ದಾರೆ   ಎಂದರು.
ಎಬಿಡಿ ಸಂಸ್ಥೆಯ ವತಿಯಿಂದ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳ ನಿರ್ಮಾಣದ ಕಾರ್ಯಕ್ಕೆ ಸಂಸ್ಥೆಯ ಅಧ್ಯಕ್ಷ ರಾಜೀವ್ ಗೌಡ ಚಾಲನೆ ನೀಡಿಮಾತನಾಡಿತಾಲೂಕಿನ ಯಾವ ಗ್ರಾಮದಲ್ಲಿ ನೀರಿನ ಅಭಾವ ಇದೆಯೋ ಆ ಗ್ರಾಮಗಳಲ್ಲಿ ಕೊಳವೆಬಾವಿಗಳನ್ನು ಕೊರೆಸಿ ನೀರಿನ ಅಭಾವವನ್ನು ನೀಗಿಸಲು  ಪುಣ್ಯ ದಿನವಾದ ಇಂದು ಪ್ರಾರಂಭ ಮಾಡಲಾಗಿದೆ ಈಗಾಗಲೇ ರಿಗ್ ಯಂತ್ರ ಗಳು ಕಾರ್ಯಾರಂಭ ಮಾಡಲಾಗಿದೆ ಎಂದರು ರಥೋತ್ಸವದ ಅಂಗವಾಗಿ ಬೆಳಗ್ಗೆ ೮ ರಿಂದ ರಾತ್ರಿಯವರೆಗೂ ಬಂದಂತಹ ಎಲ್ಲಾ ಭಕ್ತಾದಿಗಳಿಗೆ ಎಚ್ಎಎಲ್ ದೇವರಾಜ್ ಹಾಗೂ  ರಾಜೀವ್ ಗೌಡ  ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹೊರ ರಾಜ್ಯ ಗಳಿಂದ ಹಸು ಗಳನ್ನು ಮಾರಾಟ ಮಾಡಲು ರೈತರು ಆಗಮಿಸಿ ದನಗಳ ಜಾತ್ರೆ ಯಶಸ್ವಿಯಾಗಿ ನಡೆಯಿತು ವಿವಿಧ ಬಗೆಯ ರಾಸುಗಳ ಪ್ರದರ್ಶನದಲ್ಲಿ ಪಾಲ್ಗೊಂಡು ವಿವಿಧ ಜಾನಪದ ಕಲಾ ತಂಡ ಗಳು ಪ್ರದರ್ಶನ ಏರ್ಪಡಿಸಲಾಗಿತ್ತು.
ತಾಲೂಕಿನ ಆರೋಗ್ಯ ಇಲಾಖೆ ವತಿಯಿಂದ  ಆರೋಗ್ಯ ತಪಾಸಣೆ ಹಾಗೂ ಕೊರೋನ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು.


ಮಹಿಳಾ ಭಕ್ತ ಮಂಡಳಿಯಿಂದ ಸಂಗೀತ ಗಾಯನ ಹಾಗೂ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಎಬಿಡಿ ಗ್ರೂಪ್ ರಾಜೀವ್ ಗೌಡರಿಂದ ಸುಮಾರು 30ರಿಂದ 40 ಸಾವಿರ ಜನಕ್ಕೆ ಅನ್ನಸಂತರ್ಪಣೆ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿದರು.
ಎಚ್.ಎ.ಎಲ್ ದೇವರಾಜ್ ರವರಿಂದ ಭಕ್ತಾದಿಗಳಿಗೆ ಇದೇ ಮೊಟ್ಟಮೊದಲ ಬಾರಿಗೆ ಜಾತ್ರೆ ಅಂಗವಾಗಿ ಉಚಿತ ಅನ್ನಸಂತರ್ಪಣೆ ಹಾಗೂ ಅಂಗಡಿಗಳಿಗೆ ರಾಸುಗಳಿಗೆ ವಾಹನಗಳ ನಿಲುಗಡೆಗೆ ಉಚಿತ ತೆರಿಗೆ ನೀಡಿದರು.
ತಾಲೂಕಿನ ದಂಡಾಧಿಕಾರಿಗಳಾದ   ರಾಜೀವ್, ಮಾಜಿ ಶಾಸಕ ಎಂ ರಾಜಣ್ಣ, ತಾಲೂಕು  ವೈದ್ಯಾಧಿಕಾರಿ ಡಾಕ್ಟರ್ ವೆಂಕಟೇಶಮೂರ್ತಿ,ತಾಲೂಕು ಮುಖಂಡರಾದ ಪಂಚಾಕ್ಷರಿ ರೆಡ್ಡಿ , ದೊಗರನಾಯಕನಹಳ್ಳಿ ಡಿ ವಿ ವೆಂಕಟೇಶ್ , ನಾರಾಯಣಸ್ವಾಮಿ ಬಂಗಾರಪ್ಪ. ರಾಯಪ್ಪನ ಹಳ್ಳಿ ಅಶ್ವತ್ಥರೆಡ್ಡಿ. ಕೊತ್ತನೂರು ಪ್ರಭಾಕರ ರೆಡ್ಡಿ. ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಾಜು, ಎಬಿಡಿ ಗ್ರೂಪ್ನ ಸಹನಾ ರಾಜೀವ್ ಗೌಡ, ಪುರುಷೋತ್ತಮ್, ಸೇರಿದಂತೆ ತಾಲ್ಲೂಕಿನ ಎಲ್ಲಾ ಪ್ರಮುಖ ರಾಜಕೀಯ ಮುಖಂಡರು ದೇವಾಲಯ ಅಭಿವೃದ್ಧಿ ಟ್ರಸ್ಟ್ ನ ಸದಸ್ಯರು  ತಾಲೂಕಿನ ವಿವಿಧ ಭಾಗಗಳಿಂದ ಭಕ್ತಾದಿಗಳು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments