Thursday, April 25, 2024
spot_img
HomeMandyaಜನನ ಮರಣ ನೋಂದಣಿಯಲ್ಲಿ ವಿಳಂಬವಾಗದ0ತೆ ಕ್ರಮವಹಿಸಿ: ಜಿಲ್ಲಾಧಿಕಾರಿ ಎಸ್.ಅಶ್ವತಿ “ಜನನ ಮರಣ ನೋಂದಣಿ ಜಾಗೃತಿಗಾಗಿ ನೋಂದಣಿ...

ಜನನ ಮರಣ ನೋಂದಣಿಯಲ್ಲಿ ವಿಳಂಬವಾಗದ0ತೆ ಕ್ರಮವಹಿಸಿ: ಜಿಲ್ಲಾಧಿಕಾರಿ ಎಸ್.ಅಶ್ವತಿ “ಜನನ ಮರಣ ನೋಂದಣಿ ಜಾಗೃತಿಗಾಗಿ ನೋಂದಣಿ ಕಡ್ಡಾಯ” ಪೋಸ್ಟರ್ ಬಿಡುಗಡೆ

ಮಂಡ್ಯ: ಗ್ರಾಮಾಂತರ ಪ್ರದೇಶದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಜನನ ಮರಣ ಘಟನೆಗಳನ್ನು ಹಾಗೂ ಆಸ್ಪತ್ರೆಗಳಲ್ಲಿ ಘಟಿಸುವ ಜನನ ಮರಣ ಘಟನೆಗಳನ್ನು ಸಂಬAಧಿಸಿದ ಉಪ ನೋಂದಣಾಧಿಕಾರಿಗಳು ತಕ್ಷಣವೇ ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್. ಅಶ್ವತಿ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇ-ಜನ್ಮ ತಂತ್ರಾAಶದಲ್ಲಿ ಜನನ, ಮರಣ ವಿಳಂಬ ನೋಂದಣಿಯ ವರದಿಯನ್ನು ಪರಿಶೀಲಿಸಿದಾಗ ಆಸ್ಪತ್ರೆಗಳಲ್ಲಿ 2021 ಡಿಸೆಂಬರ್ ಮತ್ತು 2022 ಜನವರಿ ಮಾಹೆವರೆಗೆ ಒಟ್ಟು ಜನನ ವಿಳಂಬ ನೋಂದಣಿ (1112) ಹಾಗೂ ಒಟ್ಟು ಮರಣ ವಿಳಂಬ ನೋಂದಣಿ (262) ದಾಖಲಾಗಿವೆ ಎಂದರು.
ಜನನ, ಮರಣ ಪ್ರಮಾಣ ಪತ್ರದಲ್ಲಿ ಲಿಪಿಕ ದೋಷವಿದ್ದಲಿ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ. ಪರಿಮಿತಿ ಚಿಕ್ಕದಾಗಿರುವ ಆಸ್ಪತ್ರೆಗಳಲ್ಲಿ ನಿಗದಿತ ಕಾಲ ಮಿತಿಯೊಳಗೆ ನೋಂದಣಿ ಮಾಡಬೇಕಿದ್ದರು ವಿಳಂಬ ನೋಂದಣಿ ಹೆಚ್ಚಾಗಿರುವುದು ಕಂಡುಬರುತ್ತದೆ ಇದರ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ಮರಣ ನೋಂದಣಿಯ ಸಂದರ್ಭದಲ್ಲಿ ಮರಣಕ್ಕೆ ಸಂಬAಧಿಸಿದ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ನಮೂನೆ 4/4ಎ ಗಳನ್ನು ಸ್ಕ್ಯಾನ್ ಮಾಡಿ ಇ-ಜನ್ಮ ತಂತ್ರಾAಶದಲ್ಲಿ ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜನನ ಮರಣ ನೋಂದಣಿ ಜಾಗೃತಿಗಾಗಿ ನೋಂದಣಿ ಕಡ್ಡಾಯ ಎಂಬ ಪೋಸ್ಟ್ರರನ್ನು ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಸಂಖ್ಯಾಸAಗ್ರಹಣಾಧಿಕಾರಿ ಶಿವಮ್ಮ.ಎಂ., ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಡಾ. ಬೆಟ್ಟಸ್ವಾಮಿ, ನಗರಾಭಿವೃದ್ಧಿ ಕೋಶಾಧಿಕಾರಿ  ತುಷಾರಮಣಿ, ನಗರ ಸಭೆ ಆಯುಕ್ತರಾದ ಎಸ್. ಲೋಕೇಶ್. ಜಿ.ಪಂ. ಸಹಾಯಕ ಕಾರ್ಯದರ್ಶಿ ಸುಬ್ರಮಣ್ಯ  ಶರ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಸ್.ರಾಜಮೂರ್ತಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments