Thursday, April 25, 2024
spot_img
HomeTumkurಗ್ರಂಥಾಲಯದಲ್ಲಿರುವ ಸೌಲಭ್ಯಗಳು ಯುವಕರಿಗೆ ಸದುಪಯೋಗವಾಗಬೇಕು-ಸಿಇಓ ಡಾ: ಕೆ.ವಿದ್ಯಾಕುಮಾರಿ

ಗ್ರಂಥಾಲಯದಲ್ಲಿರುವ ಸೌಲಭ್ಯಗಳು ಯುವಕರಿಗೆ ಸದುಪಯೋಗವಾಗಬೇಕು-ಸಿಇಓ ಡಾ: ಕೆ.ವಿದ್ಯಾಕುಮಾರಿ

ತುಮಕೂರು: ಗ್ರಾಮಪಂಚಾಯತಿ ಮಟ್ಟದ ಗ್ರಂಥಾಲಯಗಳಲ್ಲಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸೇರಿದಂತೆ ಯುವ ಓದುಗರು ಸದುಪಯೋಗಪಡಿಸಿಕೊಳ್ಳುವಂತೆ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ: ಕೆ. ವಿದ್ಯಾಕುಮಾರಿ ತಿಳಿಸಿದರು.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಪೌಂಡೇಶನ್ ಹಾಗೂ ಡೆಲ್ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲಾ ಪಂಚಾಯತಿ ಸಭಂಗಣದಲ್ಲಿAದು ಜಿಲ್ಲೆಯ ಆಯ್ದ 36 ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಂಥಪಾಲಕರಿಗಾಗಿ ಏರ್ಪಡಿಸಿದ್ದ ಶಿಕ್ಷಣ ಯುವ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ ಫೌಂಡೇಶನ್ ಮತ್ತು ಡೆಲ್ ಸಂಸ್ಥೆಯವರು ಪಂಚಾಯತಿ ಮಟ್ಟದ ಗ್ರಂಥಾಲಯಗಳಿಗೆ ನೀಡಿರುವ ಟಿವಿ ಹಾಗೂ ಮೊಬೈಲ್‌ಗಳನ್ನು ವಿದ್ಯಾರ್ಥಿಗಳು ದುರುಪಯೋಗಪಡಿಸಿಕೊಳ್ಳದಂತೆ ಪಿಡಿಓ ಮತ್ತು ಗ್ರಂಥಪಾಲಕರು ನಿಗಾವಹಿಸಬೇಕೆಂದು ತಿಳಿಸಿದರು.

 ಗ್ರಂಥಪಾಲಕರು ಮೊಬೈಲ್ ಮತ್ತು ಟಿವಿಯನ್ನು ವೈಯಕ್ತಿಕ ಕೆಲಸಕ್ಕೆ ಬಳಸಬಾರದು. ಎಲ್ಲಾ ಮೊಬೈಲ್‌ಗಳಿಗೆ ಪಾಸ್‌ವರ್ಡ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಮೊಬೈಲ್ ಮತ್ತು ಟಿವಿ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇದ್ದಲ್ಲಿ ಶಿಕ್ಷಣ ಸಂಯೋಜಕರಿಗೆ ಮಾಹಿತಿ ನೀಡಬೇಕು. ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು/ಯುವಕ/ ಯುವತಿಯರ ಕಲಿಕೆಗೆ ಪೂರಕವಾಗುವಂತೆ ವೈ-ಫೈ ಬಳಕೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.

ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಂಥಾಲಯದಲ್ಲಿ ಲಭ್ಯವಿರುವ ಸವಲತ್ತುಗಳ ಬಗ್ಗೆ ಗ್ರಾಮಸಭೆ/ಸಾಮಾನ್ಯ ಸಭೆ/ ಭಿತ್ತಿ ಪತ್ರ/ ಬ್ಯಾನರ್/ ಕಸದ ವಾಹನ ಮೂಲಕ ಗ್ರಾಮ ಮಟ್ಟದಲ್ಲಿ ಪ್ರಚುರಪಡಿಸಬೇಕು ಎಂದು ಸೂಚನೆ ನೀಡಿದರು.

ಓದುಗರು ಗ್ರಂಥಾಲಯಗಳಿಗೆ ಒದಗಿಸಿರುವ ಟಿವಿ ಮತ್ತು ಮೊಬೈಲ್‌ಗಳನ್ನು ಕೌಶಲ್ಯಾಧಾರಿತ ಚಟುವಟಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಳಸಿಕೊಳ್ಳುವುದಲ್ಲದೆ, ಯೂಟ್ಯೂಬ್ ಲಿಂಕ್ ಬಳಸಿಕೊಂಡು ಐಟಿಸಿ ಸ್ಕಿಲ್/ ಶಿಕ್ಷಣಕ್ಕೆ ಸಂಬAಧಿಸಿದ ಮಾಹಿತಿಯನ್ನು ತಿಳಿದುಕೊಳ್ಳುವ ಮೂಲಕ ಯುವಕರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ತಂತ್ರಜ್ಞಾನ ಕೌಶಲ್ಯಗಳನ್ನು ಪಡೆದುಕೊಳ್ಳುವ ಮೂಲಕ ವೃತ್ತಿ ಮಾರ್ಗಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಸಬಲರಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ(ಅಭಿವೃದ್ದಿ) ಅಥಿಕ್ ಪಾಷ ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕ ಡಿ.ಆರ್. ನಿಂಗಪ್ಪ ಹಾಗೂ ಎಸ್. ಸಿದ್ದೇಶ ತರಬೇತಿ ನಡೆಸಿಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments