Friday, April 19, 2024
spot_img
HomeBangaloreಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಯುವಕಾಂಗ್ರೆಸ್ ಕಾರ್ಯಕರ್ತನಿಗೆ ಸಹಾಯಹಸ್ತ : ಬಿಬಿಎಂಪಿ ಮಾಜಿ ಸದಸ್ಯ ಎಂ.ಆನAದಕುಮಾರ್ ಮೀಸಲಾತಿ...

ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಯುವಕಾಂಗ್ರೆಸ್ ಕಾರ್ಯಕರ್ತನಿಗೆ ಸಹಾಯಹಸ್ತ : ಬಿಬಿಎಂಪಿ ಮಾಜಿ ಸದಸ್ಯ ಎಂ.ಆನAದಕುಮಾರ್ ಮೀಸಲಾತಿ ಕ್ಷೇತ್ರದ ಜನತೆಗೆ ಸೇವೆ ಸಲ್ಲಿಸಲು ಸಜ್ಜು

ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಬಂದಿದ್ದೇನೆ. ದೇವಾಸ್ಥಾನ, ಕಷ್ಟದಲ್ಲಿರುವವರಿಗೆ ಸ್ಪಂದಿಸುವುದು ಹೀಗೆ ಸಮಾಜಮುಖಿ ಕಾರ್ಯಗಳನ್ನು ಮಾಡಲು ಬಂದಿದ್ದೇನೆ. ಮೀಸಲಾತಿ ಕ್ಷೇತ್ರದ ಜನತೆಗೆ ಸೇವೆ ಸಲ್ಲಿಸಲು ಸಜ್ಜಾಗಿದ್ದೇನೆಎಂದುಬಿಬಿಎAಪಿ ಮಾಜಿ ಸದಸ್ಯ ಎಂ.ಆನAದಕುಮಾರ್ ತಿಳಿಸಿದರು.

ತಾಲೂಕಿನ ಕುಂದಾಣ ಹೋಬಳಿಯ ಬನ್ನಿಮಂಗಲ ಗ್ರಾಮದ ಯುವ ಕಾಂಗ್ರೆಸ್ ಕಾರ್ಯಕರ್ತ ರಘು ಅವರು ಕಿಡ್ನಿ ವೈಫಲ್ಯದಿಂದಾಗಿ ಬಳಲುತ್ತಿದ್ದರಿಂದ ಅವರ ಮನೆಗೆ ಭೇಟಿ ನೀಡಿ ಆರ್ಥಿಕ ನೆರವು ನೀಡಿ ಅವರು ಮಾತನಾಡಿದರು. ಚಿಕ್ಕವಯಸ್ಸಿನಲ್ಲಿಯೇ ಬ್ಯಾಟರಾಯನಪುರ ಸೊಸೈಟಿ ನಿರ್ದೇಶಕನಾಗಿ, ಬಿಬಿಎಂಪಿ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಇದನ್ನು ಗಮನಿಸಿದ ಈ ಭಾಗದ ಮುಖಂಡರು, ಆ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟರೆ ಈ ಕ್ಷೇತ್ರದಲ್ಲಿ ಯಾರು ಸಮಾನ ವ್ಯಕ್ತಿ ಕಾಣಿಸುತ್ತಿಲ್ಲ. ನೀವು ದೇವನಹಳ್ಳಿ ಕ್ಷೇತ್ರಕ್ಕೆ ಬಂದರೆ, ಇಲ್ಲಿ ಆಗಬೇಕಿರುವ ಹಲವಾರು ಅಭಿವೃದ್ಧಿ ಕರ‍್ಯಗಳು ಆಗುತ್ತದೆ ಎಂದು ಹೇಳುತ್ತಿದ್ದಾರೆ. ಅದರಂತೆ ಕಾಂಗ್ರೆಸ್ ಪಕ್ಷದ ಮುಖಂಡರ ಸಹಮತದಿಂದ ಕ್ಷೇತ್ರಕ್ಕೆ ಶಾಸಕ ಆಕಾಂಕ್ಷಿಯಾಗಿ ಬಂದಿದ್ದೇನೆ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ವಿಜಯಪುರ ಹೋಬಳಿ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಮ್ಮ ತಾಯಿ ಹುಟ್ಟಿದ ಮನೆ. ಅಲ್ಲಿಯೇ ಹುಟ್ಟಿ ಬೆಳೆದ ನಾನು ಕ್ಷೇತ್ರಕ್ಕೆ ಏನಾದರೂ ಸೇವೆ ಸಲ್ಲಿಸುವ ಉದ್ದೇಶವನ್ನಿಟ್ಟುಕೊಂಡು ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಈಗಾಗಲೇ ದೇವಾಲಯ, ನೊಂದವರಿಗೆ ಬೆನ್ನೆಲುಬಾಗಿ, ಕಾರ್ಯಕರ್ತರೊಡನೆ ಉತ್ತಮ ಬಾಂಧವ್ಯವನ್ನಿಟ್ಟುಕೊAಡಿದ್ದೇನೆ. ಪಕ್ಷ ಯಾರಿಗಾದರೂ ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಸದಾ ನಿಮ್ಮಜೊತೆಯಲ್ಲಿ ಸೇವೆ ಸಲ್ಲಿಸಲು ಸಿದ್ದನಿದ್ದೇನೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಮುಖಂಡರ ಅಭಿಪ್ರಾಯದಂತೆ ಹಾಗೂ ಹೆಬ್ಬಾಳ ಬಿಬಿಎಂಪಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ದಿ ಕೆಲಸಗಳನ್ನು ನೋಡಿ ನೀವು 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಂತೆ ನಮ್ಮ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಎಂದು ಹೇಳಿದರು.

ಈ ವೇಳೆಯಲ್ಲಿ ಮುಖಂಡ ಸ್ನೇಹಜೀವಿ ಬಿದಲೂರು ನಾರಾಯಣಸ್ವಾಮಿ, ಯುವ ಕಾಂಗ್ರೆಸ್‌ನ ತಾಲೂಕು ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷರಾದ ಗಂಗೂಲಿ, ಚಂದನ್‌ಗೌಡ, ಕುಂದಾಣ ಹೋಬಳಿ ಅಧ್ಯಕ್ಷ ಮುನೇಶ್, ದೇವನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೃತ್ವಿ, ಯುವಕಾಂಗ್ರೆಸ್ ಮುಖಂಡ ಆಲೂರುದುದ್ದನಹಳ್ಳಿ ದುನುಶ್, ಬನ್ನಿಮಂಗಲ ಗ್ರಾಮಸ್ಥರು ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments