Friday, April 19, 2024
spot_img
HomeTumkurಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಫೋನ್ ಇನ್: ಗೊಂದಲ ನಿವಾರಿಸಿಕೊಂಡ ವಿದ್ಯಾರ್ಥಿಗಳು

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಫೋನ್ ಇನ್: ಗೊಂದಲ ನಿವಾರಿಸಿಕೊಂಡ ವಿದ್ಯಾರ್ಥಿಗಳು

ತುಮಕೂರು: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಪರೀಕ್ಷೆಗಳ ತಯಾರಿ ಹಾಗೂ ಮಾರ್ಗದರ್ಶನ ಕುರಿತಂತೆ ಮತ್ತು ಪೋಷಕರಿಗೆ ಪರೀಕ್ಷೆ ಕುರಿತ ಅನುಮಾನಗಳನ್ನು ಬಗೆಹರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ “ನೇರ ಫೋನ್ ಇನ್” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ವಿಷಯ ತಜ್ಞರು ಭಾಗವಹಿಸಿ ವಿದ್ಯಾರ್ಥಿಗಳ ದೂರವಾಣಿ ಕರೆ ಸ್ವೀಕರಿಸಿ ಸಮಸ್ಯೆಗಳಿಗೆ ಪರಿಹಾರ, ಪ್ರಶ್ನೆಗಳಿಗೆ ಉತ್ತರ ಹಾಗೂ ಮಾರ್ಗದರ್ಶನ ನೀಡಿದರು.

ಪ್ರಶ್ನೆ ಪತ್ರಿಕೆ ವಿನ್ಯಾಸ, ಮಾದರಿ ಪ್ರಶ್ನೆ ಪತ್ರಿಕೆ, ರೂಪಣಾತ್ಮಕ ಪರೀಕ್ಷೆಗಳ ಬಗ್ಗೆ, ಪರೀಕ್ಷಾ ತಯಾರಿ ಬಗ್ಗೆ, ನೆನಪಿನಲ್ಲಿ ಉಳಿಯುವಂತೆ ಅಭ್ಯಾಸ ಮಾಡುವ ವಿಧಾನ, ವಿಷಯವಾರು ಪಠ್ಯದ ಬಗ್ಗೆ, ಹೆಚ್ಚು ಅಂಕಗಳನ್ನು ಗಳಿಸುವ ಕುರಿತು ವಿದ್ಯಾರ್ಥಿಗಳ ಹಾಗೂ ಪಾಲಕರ ಪ್ರಶ್ನೆಗಳಿಗೆ ವಿಷಯ ತಜ್ಞರು ದೂರವಾಣಿ ಮೂಲಕವೇ ಪರಿಹಾರ ನೀಡಿದರು.

ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕರೆ ಮಾಡಿ ಇದರ ಸದುಪಯೋಗ ಪಡೆದುಕೊಂಡರು. ಫೋನ್ ಇನ್ ಕಾರ್ಯಕ್ರಮದಲ್ಲಿ ಕನ್ನಡ ವಿಷಯಕ್ಕೆ ಕುರಿತು 12 ವಿದ್ಯಾರ್ಥಿಗಳು ವ್ಯಾಕರಣಕ್ಕೆ ಸಂಬAಧಿಸಿದAತೆ ಪ್ರಶ್ನೆಗಳನ್ನು ಕೇಳಿದರು.

ಗದ್ಯ-ಪದ್ಯಗಳ ಭಾಗಗಳನ್ನು ನೆನಪಿಟ್ಟುಕೊಳ್ಳುವ ಬಗ್ಗೆ ಪತ್ರಲೇಖನ ಛಂದಸ್ಸು ಅಲಂಕಾರಗಳ ಕುರಿತ ಪ್ರಶ್ನೆಗಳಿಗೆ ಪರಿಹಾರ ಬಗೆಹರಿಸಿಕೊಂಡರು.

ಅAತೆಯೇ, ಇಂಗ್ಲೀಷ್ ವಿಷಯಕ್ಕೆ ಸಂಬAಧಿಸಿದAತೆ, 10 ವಿದ್ಯಾರ್ಥಿಗಳು 15-20 ಪ್ರಶ್ನೆಗಳನ್ನು ಕೇಳಿದರು. What are finite and non-finite verbs, Important essays, long answers questions, weightage for lessons, poems and grammar, how to write answers effectively, which are the topics covered in grammar, and how to remember answers for long time ಪ್ರಶ್ನೆಗಳನ್ನು ಕೇಳಿ ಗೊಂದಲ ನಿವಾರಿಸಿಕೊಂಡರು.

ಹಿAದಿ ವಿಷಯದಲ್ಲಿ 10 ಜನ ವಿದ್ಯಾರ್ಥಿಗಳು ವ್ಯಾಕರಣ 3-1 ಅಂಕದ ಪ್ರಶ್ನೆಗಳ ಕುರಿತಾದ ಪತ್ರಲೇಖನ ಪದ್ಯ, ಪ್ರಬಂಧ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು.

ವಿಜ್ಞಾನ ವಿಷಯಕ್ಕೆ ಸಂಬAಧಿಸಿದAತೆ 10 ಜನ ವಿದ್ಯಾರ್ಥಿಗಳು ಕರೆ ಮಾಡಿದ್ದು, ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ಓದಿ ನೆನಪಿಟ್ಟುಕೊಳ್ಳುವ ಬಗ್ಗೆ ಮತ್ತು ವಿಜ್ಞಾನದ ಚಿತ್ರಗಳನ್ನು ಬರೆದು ಭಾಗಗಳನ್ನು ಗುರುತಿಸುವ ಬಗ್ಗೆ ರಸಾಯನಿಕ ಸಮೀಕರಣ ಸೂತ್ರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಸೂಕ್ತ ಉತ್ತರಗಳನ್ನು ಪಡೆದರು.

ಉಳಿದಂತೆ ಗಣಿತ ವಿಷಯದಲ್ಲಿ 12 ಜನ ವಿದ್ಯಾರ್ಥಿಗಳು ಕರೆ ಮಾಡಿ ಆನ್ವಯಿಕ ಪ್ರಶ್ನೆಗಳು, ಪ್ರಮೇಯಗಳು ಮತ್ತು ಗಣಿತದಲ್ಲಿ ಪ್ರಶ್ನೆಗಳು ಸರಳ ಅಥವಾ ಕಠಿಣವಾಗಿರುವ ಬಗ್ಗೆ, ಶ್ರೇಣಿಗಳ ಬಗ್ಗೆ ಗ್ರಾಫ್ ಮತ್ತು ರಚನೆಯ ಬಗ್ಗೆ, ರೇಖಾ ಗಣಿತದ ಬಗ್ಗೆ ಪ್ರಶ್ನೆ ಕೇಳಿ ಸಮಸ್ಯೆ ಬಗೆಹರಿಸಿಕೊಂಡರು.

ಸಮಾಜ ವಿಜ್ಞಾನ ವಿಷಯದಲ್ಲಿ 17 ವಿದ್ಯಾರ್ಥಿಗಳು ಕರೆ ಮಾಡಿ ಪೂರ್ವ ತಯಾರಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಯ ಬಗ್ಗೆ 3-4 ಅಂಕದ ಪ್ರಶ್ನೆಗಳಿಗೆ ಉತ್ತರಿಸುವ ಬಗ್ಗೆ, ಭಾರತದ ನಕ್ಷೆ ಮತ್ತು ಸ್ಥಳ ಗುರುತಿಸುವ ಬಗ್ಗೆ ಘಟನೆ ಮತ್ತು ದಿನಾಂಕಗಳನ್ನು ನೆನಪಿಟ್ಟುಕೊಳ್ಳುವ ಬಗ್ಗೆ ಮಾಹಿತಿ ಪಡೆದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ಸೇರಿದಂತೆ ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು, ಸಮನ್ವಯ ಸಂಪನ್ಮೂಲ ಶಿಕ್ಷಕರುಗಳಾದ ಗುರುಪ್ರಸಾದ್, ಕೃಷ್ಣಪ್ಪ, ಶ್ರೀಕಾಂತ್, ಗಂಗಯ್ಯ, ರೇಣುಕಾ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments