Thursday, March 28, 2024
spot_img
HomeRamnagarಆರೋಗ್ಯ ಇಲಾಖೆಯ ಸೇವಾ - ಸೌಲಭ್ಯ ಪಡೆಯಲು ಸಲಹೆ: ಗಂಗಾಧರ್.

ಆರೋಗ್ಯ ಇಲಾಖೆಯ ಸೇವಾ – ಸೌಲಭ್ಯ ಪಡೆಯಲು ಸಲಹೆ: ಗಂಗಾಧರ್.

ರಾಮನಗರ: ಆಧುನಿಕ ಜೀವನ ಶೈಲಿ, ಖಾಧ್ಯ ಪದಾರ್ಥಗಳಿಂದ ಮಾಡಿದ ಆಹಾರ ಸೇವನೆ ಮತ್ತು ದುಷ್ಚಟಗಳ ಅಭ್ಯಾಸದಿಂದ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಮೂತ್ರಪಿಂಡಗಳ ವೈಫಲ್ಯ, ಹೃದಯ ಸಂಬAಧಿ ಖಾಯಿಲೆಗಳು ಜನಸಾಮಾನ್ಯರಲ್ಲಿ ಕಂಡುಬರುತ್ತಿದ್ದು, ಇವುಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಪ್ರಾಥಮಿಕ ಹಂತದಲ್ಲಿ ರೋಗಗಳ ಪತ್ತೆ ಮಾಡಿ ಚಿಕಿತ್ಸೆ  ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್ ರವರು ತಿಳಿಸಿದರು.
ಚನ್ನಪಟ್ಟಣ ಟೌನ್, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ರಾಮನಗರ ಜಿಲ್ಲಾ ಭಾರತ ಸೇವಾಧಳ ವತಿಯಿಂದ ತಾಲ್ಲೂಕು ಮಟ್ಟದ ಶಿಕ್ಷಕರುಗಳಿಗೆ ಕಾರ್ಯಾಗಾರವನ್ನು ಆಯೋಜಿಸಿದ್ದು ಈ ಕಾರ್ಯಗಾರದಲ್ಲಿ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳು, ಸೇವೆಗಳು, ಯೋಜನೆಗಳು ಹಾಗೂ ಕೋವಿಡ್ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.  
ಆರೋಗ್ಯ ಇಲಾಖೆಯಲ್ಲಿ ದೊರೆಯುವ ಸೇವಾ – ಸೌಲಭ್ಯಗಳ ಕುರಿತು ಮಾತನಾಡುತ್ತಾ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆ, ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಚುಚ್ಚುಮದ್ದು ಕಾರ್ಯಕ್ರಮ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಕುಟುಂಬ ಕಲ್ಯಾಣ ಯೋಜನೆಗಳ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಸಾಂಕ್ರಾಮಿಕ ರೋಗಗಳಾದ ಕ್ಷಯ, ಮೇಲೇರಿಯಾ, ಡೆಂಗ್ಯು, ಚಿಕುನ್‌ಗುನ್ಯ, ಕುಷ್ಠರೋಗ, ಹೆಚ್.ಐ.ವಿ/ಏಡ್ಸ್ ಇತ್ಯಾದಿ ರೋಗಗಳು ಹರಡುವಿಕೆ, ಲಕ್ಷಣಗಳು, ಪತ್ತೆಹಚ್ಚುವಿಕೆ, ಚಿಕಿತ್ಸೆ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಾಂಕ್ರಾಮಿಕ ರೋಗಗಳ ಶಂಕಿತ ವ್ಯಕ್ತಿಗಳು ಪ್ರಾರಂಭಿಕ ಹಂತದಲ್ಲಿಯೇ ಪರೀಕ್ಷೆ ಮಾಡಿಸಿಕೊಂಡು ಉಚಿತವಾಗಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಒಂದುವೇಳೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದಲ್ಲಿ ಮೇಲ್ದರ್ಜೆ ಆಸ್ಪತ್ರೆಗಳಿಗೆ ನಿರ್ದೇಶನಮಾಡಲಾಗುವುದು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಕಾರ್ಡ್ ವಿತರಿಸಲಾಗುತ್ತಿದ್ದು. ಇದರ ಮುಖ್ಯ ಉದ್ದೇಶ ಮಾರಣಾಂತಿಕ ರೋಗಗಳಾದ ಕ್ಯಾನ್ಸರ್, ಮೂತ್ರಪಿಂಡಗಳ ವೈಫಲ್ಯ, ಹೃದಯ ಸಂಬAಧಿ ಖಾಯಿಲೆಗಳು, ಸುಟ್ಟಗಾಯ, ಅಪಘಾತ, ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆ ಹಾಗೂ ಇತ್ಯಾಧಿ ಖಾಯಿಲೆಗಳಿಗೆ ಬಿ.ಪಿ.ಎಲ್ ಕುಟುಂಬದ ಸದಸ್ಯರಿಗೆ ಒಂದು ವರ್ಷದಲ್ಲಿ ೫ ಲಕ್ಷ ಮತ್ತು ಎ.ಪಿ.ಎಲ್ ಕುಟುಂಬದ ಸದಸ್ಯರಿಗೆ ವರ್ಷದಲ್ಲಿ ೧.೫ ಲಕ್ಷದವರೆಗೆ ಚಿಕಿತ್ಸಾವೆಚ್ಚವನ್ನು ಭರಿಸಲಾಗುತ್ತದೆ. ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಎಸ್.ಬಿ.ಸಿ.ಸಿ ಸಂಯೋಜಕ ಸುರೇಶ್‌ಬಾಬು, ಜಿಲ್ಲಾ ಎಸ್.ಬಿ.ಸಿ.ಸಿ ಸಂಯೋಜಕ, ಮಾತನಾಡುತ್ತಾ, ಶಾಲೆಗಳಲ್ಲಿ ಕೋವಿಡ್ ಸೋಂಕು ನಿಯಂತ್ರಿಸ ಬೇಕಾದರೆ ಮಕ್ಕಳು ಆಟವಾಡುವ ಸಂದರ್ಭಗಳಲ್ಲಿ ಗುಂಪು-ಗುAಪಾಗಿ ಸೇರದಂತೆ ಅತಂರವನ್ನು ಕಾಪಾಡಿಕೊಳ್ಳಬೇಕು, ಮಕ್ಕಳಿಗೆ ಕೈಗಳನ್ನು ಸ್ವಚ್ಛಗೊಳಿಸಲು ಸೋಪು ಮತ್ತು ಸ್ಯಾನಿಟೈಸರ್, ಆಯ್ದ ಪ್ರದೇಶಗಳಲ್ಲಿ ಇಡಬೇಕು, ವಾರಕೊಮ್ಮೆ ಶೌಚಾಲಯ, ತರಗತಿಗಳು, ಆಟದ ಮೈದಾನದ ಸ್ವಚ್ಛತೆ ಬಗ್ಗೆ ಮೇಲ್ವಿಚಾರಣೆ ಮಾಡುವುದು. ಬಿಸಿ ಊಟದ ಅಡುಗೆ ಸಿಬ್ಬಂದಿ ಅಡುಗೆ ತಯಾರಿಸುವ ವೇಳೆ, ಊಟ ಬಡಿಸುವ ವೇಳೆ ರಕ್ಷಾ ಕವಚಗಳನ್ನು ಕಡ್ಡಾಯವಾಗಿ ಧರಿಸಬೇಕು. ಜೊತೆಗೆ ಮಕ್ಕಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳಬೇಕು ತರಗತಿಯ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ ಸಾಮಾಜಿಕ ಮಾಸ್ಕ್ ಧರಿಸುವುದು, ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳಬೇಕು ತರಗತಿಯ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸೋಮಶೇಖರ್, ಬಂಡಾರಿ, ರೇವಣಸಿದ್ದಪ್ಪ, ಜಿಲ್ಲಾ ಸಂಘಟಿಕರಾದ ರಾಜು, ಅಧಿನಾಯಕ ಶಿವಕುಮಾರಸ್ವಾಮಿ ಹಾಗೂ ಶಿಕ್ಷಕರು ಹಾಜರಿದ್ದರು.  

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments