Thursday, April 25, 2024
spot_img
HomeBangaloreವಿಶ್ವನಾಥಪುರ ಪೊಲೀಸರ ಕಾರ್ಯåಚರಣೆ: ಅಕ್ರಮ ಗ್ಯಾಸ್ ರೀ-ಫಿಲ್ಲಿಂಗ್ ಮಳಿಗೆ ಮೇಲೆ ದಾಳಿ

ವಿಶ್ವನಾಥಪುರ ಪೊಲೀಸರ ಕಾರ್ಯåಚರಣೆ: ಅಕ್ರಮ ಗ್ಯಾಸ್ ರೀ-ಫಿಲ್ಲಿಂಗ್ ಮಳಿಗೆ ಮೇಲೆ ದಾಳಿ

ದೇವನಹಳ್ಳಿ: ತಾಲೂಕಿನ ಚಪ್ಪರಕಲ್ಲು ಬಳಿಯ ಖಾಸಗೀ ಮಳಿಯೊಂದರಲ್ಲಿ ಅಕ್ರಮವಾಗಿ ಗ್ಯಾಸ್ ಸಿಲೆಂಡರ್ ಫಿಲ್ಲಿಂಗ್ ಮಾಡುತ್ತಿದ್ದ ಹಿನ್ನಲೆಯಲ್ಲಿ ವಿಶ್ವನಾಥಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ನೇತೃತ್ವದಲ್ಲಿ ಕಾರ‍್ಯಚರಣೆ ನಡೆಸಿ ಗ್ಯಾಸ್ ಸಿಲೆಂಡರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ರಮವಾಗಿ ಗ್ಯಾಸ್ ರಿ-ಫಿಲ್ಲಿಂಗ್ ಮಾಡುತ್ತಿದ್ದ ಮಳಿಗೆಯಿಂದ 16 ದೊಡ್ಡ ಸಿಲಿಂಡರ್, 6 ಚಿಕ್ಕ ಗ್ಯಾಸ್ ಸಿಲಿಂಡರ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗ್ಯಾಸ್ ತುಂಬಿಸಲಾಗುತ್ತಿದ್ದ ಆರೋಪದಡಿಯಲ್ಲಿ ದಾಳಿ ನಡೆಸಲಾಗಿತ್ತು. ವಿಶ್ವನಾಥಪುರ ಪೊಲೀಸರು ಮಳಿಗೆ ಮಾಲೀಕನ ಮೇಲೆ ಪ್ರಕರಣ ದಾಖಲಿಸಿ, ಕಾನೂನು ಕ್ರಮಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments