Tuesday, September 26, 2023
spot_img
HomeBangaloreಶೈಕ್ಷಣಿಕ ಶಿಕ್ಷಣ ಪ್ರಗತಿಗೆ ಎಲ್ಡ್ರಾಕ್ ಇಂಡಿಯಾ ವತಿಯಿಂದ ಇಂಡಿಯಾ ಕೆ-12 ಪ್ರಶಸ್ತಿ ಪ್ರಧಾನ ಬೆಂಗಳೂರು ಗ್ರಾಮಾಂತರ...

ಶೈಕ್ಷಣಿಕ ಶಿಕ್ಷಣ ಪ್ರಗತಿಗೆ ಎಲ್ಡ್ರಾಕ್ ಇಂಡಿಯಾ ವತಿಯಿಂದ ಇಂಡಿಯಾ ಕೆ-12 ಪ್ರಶಸ್ತಿ ಪ್ರಧಾನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ವಿಹಾನ್ ಪಬ್ಲಿಕ್ ಶಾಲೆ ಆಯ್ಕೆ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೈಕ್ಷಣಿಕ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದರಲ್ಲಿ ದೇವನಹಳ್ಳಿ ತಾಲೂಕಿನ ವಿಹಾನ್ ಪಬ್ಲಿಕ್ ಶಾಲೆ ಆಯ್ಕೆಯಾಗುವುದರ ಮೂಲಕ ಎಲ್ಡ್ರಾಕ್ ಇಂಡಿಯಾ ವತಿಯಿಂದ ಹಮ್ಮಿಕೊಂಡಿದ್ದ ಇಂಡಿಯಾ ಕೆ-12 ಪ್ರಶಸ್ತಿ ಪಡೆಯುವುದರ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ.

ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಎಲ್ಡ್ರಾಕ್ ಇಂಡಿಯಾ ವತಿಯಿಂದ ಏರ್ಪಡಿಸಿದ್ದ ಇಂಡಿಯಾ ಕೆ-12 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಹಾನ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಪ್ರತಾಪ್ ಯಾದವ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳನ್ನು ಗುರ್ತಿಸಿ ಅವರಿಗೆ ಪ್ರೋತ್ಸಾಹದಾಯವನ್ನಾಗಿಸುವ ಕೆಲಸವನ್ನು ಮಾಡುತ್ತಿರುವ ಎಲ್ಡ್ರಾಕ್ ಇಂಡಿಯಾ ಅವರ ಸೇವೆ ನಿಜಕ್ಕೂ ಶ್ಲಾಘನೀಯವಾದದ್ದು, ಎಲೆಮರಿಕಾಯಿಯಂತೆ ಇದ್ದಂತಹ ಶಿಕ್ಷಣ ಸಂಸ್ಥೆಗಳನ್ನು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ಸಂಸ್ಥೆಯ ಎಲ್ಲರಿಗೂ ನಮ್ಮ ಶಾಲಾಡಳಿತ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪ್ರತಿ ವರ್ಷ ಶಿಕ್ಷಣ ಸಂಸ್ಥೆಗಳನ್ನು ಗುರ್ತಿಸಿ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟ ಮತ್ತು ಅಲ್ಲಿನ ವ್ಯವಸ್ಥಿತ ಚಟುವಟಿಕೆಗಳ ಆಧಾರದಲ್ಲಿ ರಾಜ್ಯದ 380 ಶಾಲೆಗಳ ಪೈಕಿ ನಮ್ಮ ಶಾಲೆಯನ್ನೂ ಸಹ ಗುರ್ತಿಸಿ ಗೌರವಿಸಿದ್ದಾರೆ. ಕಳೆದ 2019ರಲ್ಲಿಯೂ ಸಹ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಯ ಅಡಿಯಲ್ಲಿ ಎಕೋ-ಫ್ರೆöÊಂಡ್ಲಿ ಕ್ಯಾಂಪಸ್ ಅವಾರ್ಡ್ ಸಹ ನೀಡಿರುವುದಕ್ಕೆ ಸಂಸ್ಥೆಗೆ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

ಸಮಾರಂಭದಲ್ಲಿ 380 ಶಾಲೆಗಳ ಮಾಲೀಕರು, ಮುಖ್ಯೋಪಾದ್ಯಾಯರು, ಶೈಕ್ಷಣಿಕ ಶಿಕ್ಷಣ ಸಂಸ್ಥೆಗಳ ಆಡಳಿತಾಕಾರಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments