Wednesday, September 27, 2023
spot_img
HomeChikballapurವಿವೇಕಾನಂದ ಕಾಲೇಜಿನಲ್ಲಿ ವ್ಯಾಪಾರ ಮೇಳ

ವಿವೇಕಾನಂದ ಕಾಲೇಜಿನಲ್ಲಿ ವ್ಯಾಪಾರ ಮೇಳ

ಚಿಂತಾಮಣಿ: ಜಾಗತಿಕ ಸ್ಪರ್ಧಾತ್ಮಕ ಬದಲಾವಣೆಯ ಯುಗದಲ್ಲಿ ವಿಜ್ಞಾನ ಹೇಗೆ ವೇಗವಾಗಿ ತನ್ನ ಪಥದಲ್ಲಿ ಸಾಗುತ್ತಿದೆಯೋ ಅದಕ್ಕಿಂತ ಹೆಚ್ಚಾಗಿ ವ್ಯವಹಾರ ವಾಣಿಜ್ಯ, ವ್ಯಾಪಾರದ ಹೂಡಿಕೆ, ಬಂಡವಾಳ ವಿಷಯಗಳು ಕೂಡ ಅತ್ಯಂತ ಶರವೇಗದಲ್ಲಿ ಬೆಳೆಯುತ್ತು ಇಡೀ ವಿಶ್ವವೇ ಒಂದು ವಾಣಿಜ್ಯ ಪ್ರಗತಿಯ ಪಥದಲ್ಲಿ ಕೊಂಡೊಯ್ಯುವAತಹ ಸ್ಥಿತಿ ನಿರ್ಮಾಣವಾಗಿದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ವೆಂಕಟಶಿವಾರೆಡ್ಡಿ ನುಡಿದರು.

ಅವರು ನಗರದ ಎನ್.ಆರ್.ಬಡಾವಣೆಯಲ್ಲಿರುವ ವಿವೇಕಾನಂದ ಕಾಲೇಜಿನಲ್ಲಿ ಆಯೋಜಿಸಿದ್ದ ವ್ಯಾಪಾರ ಮೇಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಇಂತಹ ವಾಣಿಜ್ಯ ಮೇಳಗಳಿಂದ ವಾಣಿಜ್ಯ ಶಿಖರವನ್ನು ಏರಲು ಪೂರಕವಾಗಿರುತ್ತದೆ, ಮಾರುಕಟ್ಟೆ ವ್ಯವಸ್ಥೆ, ನಿರ್ವಹಣೆ, ನಿರ್ಧಾರ ಹೀಗೆ ಹತ್ತು ಹಲವು ಮಾದರಿಯ ಚಟುವಟಿಕೆಗಳು ಇಂತಹ ಮೇಳಗಳಲ್ಲಿ ನಾವು ಕಾಣಬಹುದೆಂದರು.

ಈ ಸಂದರ್ಭದಲ್ಲಿ ಕಾಲೇಜಿನ ಸಂಸ್ಥಾಪಕರಾದ ವೆಂಕಟೀಶ್ ಮೂರ್ತಿ, ನಾಗರಾಜ್, ಪ್ರಾಧ್ಯಾಪಕರಾದ ನಾಗಶ್ವೇತ, ಮಂಜುನಾಥ್ ಎಸ್.ವಿ., ಅಂಬರೀಶ್, ಮಂಜುನಾಥ್ ಮುಂತಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments