Friday, March 24, 2023
spot_img
HomeChikballapurವಸತಿರಹಿತ ಪಲಾನುಭವಿಗಳ ಆಯ್ಕೆ

ವಸತಿರಹಿತ ಪಲಾನುಭವಿಗಳ ಆಯ್ಕೆ

ಗುಡಿಬಂಡೆ:  ಚಿಕ್ಕಬಳ್ಳಾಪುರ ತಾಲ್ಲೂಕು ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾ ಪಂ ಅಧ್ಯಕ್ಷರಾದ ಪೃಥ್ವಿರಾಜ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಫಲಾನುಭವಿಗಳನ್ನು ಬಸವ ವಸತಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು .

ಈ ಸಂದರ್ಭದಲ್ಲಿ ಜನರ ಯೋಜನೆ – ಜನರ ಅಭಿವೃದ್ಧಿ ಭಾಗವಾಗಿ 2022-23 ರ ಪಂಚಾಯಿತಿ ಅಭಿವದ್ಧಿ ಯೋಜನೆ ಸಿದ್ಧಪಡಿಸಲಾಯಿತು,  ಅಲ್ಲದೆ 2020-2021 ನೇ ಸಾಲಿನ ಜಮಾಬಂದಿ ಒಪ್ಪಿಸಲಾಯಿತು. ಈ ವೇಳೆ  ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ  ರತ್ನಮ್ಮ, ಚಿಕ್ಕಬಳ್ಳಾಪುರ ತಾಲ್ಲೂಕು ಕಾರ್ಮಿಕ ನಿರೀಕ್ಷಕರಾದ ಮಂಜುಳಾ, ಗ್ರಾಮ ಪಂಚಾಯಿತಿ ಪಿಡಿಒ ಮದ್ದರೆಡ್ಡಿ , ಗ್ರಾಮ ಪಂಚಾಯ್ತಿ ಸದಸ್ಯರು, ಸಿಬ್ಬಂದಿವರ್ಗ, ಸಂಘ ಸಂಸ್ಥೆಗಳ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಭಾಗವಹಿಸಿದ್ದರು . 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments