Monday, August 15, 2022
spot_img
HomeChikballapurದಿಬ್ಬೂರಹಳ್ಳಿ ಗ್ರಾ.ಪಂ. ನಾಗರತ್ನಮ್ಮ ರವರು ರಾಜೀನಾಮೆ ನೀಡಿದ್ದರಿಂದ ಪುನಃ ಚುನಾವಣೆ

ದಿಬ್ಬೂರಹಳ್ಳಿ ಗ್ರಾ.ಪಂ. ನಾಗರತ್ನಮ್ಮ ರವರು ರಾಜೀನಾಮೆ ನೀಡಿದ್ದರಿಂದ ಪುನಃ ಚುನಾವಣೆ

ಶಿಡ್ಲಘಟ್ಟ: ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಲ್ಲಿ ಈ ಹಿಂದೆ ಅವಿರೋಧವಾಗಿ ಆಯ್ಕೆಯಾಗಿದ್ದ ಸಾಮಾನ್ಯ ಮಹಿಳೆ ನಾಗರತ್ನಮ್ಮ ರವರು ರಾಜೀನಾಮೆ ನೀಡಿದ್ದರಿಂದ ಪುನಃ ಚುನಾವಣೆ ನಡೆಯಿತು.
ಈ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳು ಬಿ ಆರ್ ಅನುರಾಧ ಮತ್ತು ನಿಶ್ಚಿತ ರವರು ಸಾಮಾನ್ಯ ಮಹಿಳೆಯ ಅಧ್ಯಕ್ಷ ಸ್ಥಾನಕ್ಕೆ ನಾಮಿನೇಷನ್ ಮಾಡಿದ್ದಾರೆ.
ಗ್ರಾಮ ಪಂಚಾಯಿತಿಯ ಗುಪ್ತ ಮತದಾನದ ಮೂಲಕ ಒಟ್ಟು 15 ಮತಗಳು ಚಲಾವಣೆಯಾಗಿದ್ದವು.ಇನ್ನು ಬಿ ಆರ್ ಅನುರಾಧ 7 ಮತಗಳನ್ನು ಪಡೆದರೆ,ನಿಶ್ಚಿತ 8 ಮತಗಳನ್ನು ಪಡೆದಿದ್ದಾರೆ.ಸಾಮಾನ್ಯ ಮಹಿಳಾ ಅಭ್ಯರ್ಥಿ ನಿಶ್ಚಿತ ರವರು 8 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಮಂಜುನಾಥ್ ತಿಳಿಸಿದರು.
ನೂತನ ಅಧ್ಯಕ್ಷೆ ಬೈಯಪ್ಪನಹಳ್ಳಿ ನಿಶ್ಚಿತ ಮಾತನಾಡಿ ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕರಿಗೆ ಉತ್ತಮವಾದಂತಹ ಮೂಲಭೂತ ಸೌಕರ್ಯಗಳನ್ನು ಹಾಗೂ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡಿಕೊಡುತ್ತೇನೆ.ಯಾವುದೇ ವ್ಯಕ್ತಿಗೂ ಅನಾನುಕೂಲವಾಗದಂತೆ ನಿರ್ವಸುತ್ತೇನೆ ಎಂದು ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಾಯಕರಾದ ಆಂಜಿನಪ್ಪ ಪುಟ್ಟು ಮಾತನಾಡಿ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಮಧ್ಯಂತರ ಚುನಾವಣೆಯಿಂದ ಕಾಂಗ್ರೆಸ್ ಬೆಂಬಲಿತ ಮಹಿಳಾ ಅಭ್ಯರ್ಥಿ ನಿಶ್ಚಿತ ಜಯಶೀಲರಾಗಿದ್ದಾರೆ. ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಶುಭಕೋರಿ ಅವರನ್ನ ಬೆಂಬಲಿಸಿ ಇಲ್ಲಿನ ಮುಖಂಡರು ಹಾಗೂ ಗ್ರಾಮಸ್ಥರು ಉತ್ತಮ ಸೇವೆಗಳನ್ನು ಪಡೆಯಿರಿ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments