Saturday, April 20, 2024
spot_img
HomeBangalore Ruralಕೆಐಎಡಿಬಿ ಭೂ ಸ್ವಾಧೀನ ಪರವಾಗಿ ಚನ್ನರಾಯಪಟ್ಟಣ ಹೋಬಳಿ ರೈತರ ಆಗ್ರಹ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಎಡಿಸಿ...

ಕೆಐಎಡಿಬಿ ಭೂ ಸ್ವಾಧೀನ ಪರವಾಗಿ ಚನ್ನರಾಯಪಟ್ಟಣ ಹೋಬಳಿ ರೈತರ ಆಗ್ರಹ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಎಡಿಸಿ ಗೆ ಮನವಿ. 7 ಬೇಡಿಕೆ ಮೇರೆಗೆ ಸ್ವಾಧೀನಕ್ಕೆ ಒತ್ತಾಯ

ದೇವನಹಳ್ಳಿ: ತಾಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಚನ್ನರಾಯಪಟ್ಟಣ ಹೋಬಳಿಯಲ್ಲಿ 1770 ಎಕರೆ ವಿಸ್ತೀರ್ಣದ ಪೈಕಿ 1400 ಎಕರೆ ವಿಸ್ತೀರ್ಣದ ಜಮೀನಿನ ರೈತರು ಭೂಸ್ವಾಧೀನ ಪಡಿಸಿಕೊಳ್ಳುವಂತೆ 7 ಅಂಶಗಳ ಬೇಡಿಯನ್ನಿಟ್ಟು ಅಪರ ಜಿಲ್ಲಾಧಿಕಾರಿ ವಿಜಯ ಈ ರವಿಕುಮಾರ್ ಅವರಿಗೆ ಸಾಮೂಹಿಕವಾಗಿ ರೈತರು ಮನವಿ ಪತ್ರ ಸಲ್ಲಿಸಿದರು.

ಇತ್ತೀಚೆಗಷ್ಟೇ ಚನ್ನರಾಯಪಟ್ಟಣ ಹೋಬಳಿಯ ಕೆಲ ರೈತರು ಭೂಸ್ವಾಧೀನ ವಿರೋಧಿಸಿ ಟ್ರಾö್ಯಕ್ಟರ್ ರ‍್ಯಾಲಿ ಮೂಲಕ ಸರಕಾರದ ಗಮನ ಸೆಳೆಯಲಾಗಿತ್ತು. ಇದೀಗ ಏಕಾ ಏಕೀ ಕೆಲವು ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಿದ್ದಲ್ಲಿ ನಮ್ಮ ಭೂಮಿಯನ್ನು ಕೆಐಎಡಿಬಿಗೆ ನೀಡುವುದಾಗಿ ಒತ್ತಾಯಿಸಿದರು. ಹರಳೂರು, ಮುದ್ದೇನಹಳ್ಳಿ, ನಲ್ಲೂರು, ಎಸ್.ತೆಲ್ಲೋಹಳ್ಳಿ, ಪೋಲನಹಳ್ಳಿ, ನಾಗನಾಯಕನಹಳ್ಳಿ, ಚೀಮಾಚನಹಳ್ಳಿ, ಮಲ್ಲೇಪುರ, ಪಾಳ್ಯ, ಚನ್ನರಾಯಪಟ್ಟಣ, ಮಟ್ಟಬಾರ್ಲು, ಗೋಕರೆಬಚ್ಚೇನಹಳ್ಳಿ, ಹ್ಯಾಡಾಳ ಗ್ರಾಮಗಳ ಜಮೀನುಗಳನ್ನು 2ನೇ ಹಂತದ ಭೂಸ್ವಾಧಿನಕ್ಕೆ 1400 ಎಕರೆಯಷ್ಟು ಸ್ವಾಧಿನ ಪಡಿಸಿಕೊಳ್ಳಲು ಮನವಿ ಮಾಡಿದರು.

ಮಟ್ಟಬಾರ್ಲು ರೈತ ಎಂ.ಜಿ.ರಾಜಣ್ಣ ಮಾತನಾಡಿ, ಜಿಲ್ಲಾಧಿಕಾರಿಗಳ ಮೂಲಕ ನಮ್ಮ ಜಮೀನು ಕೆಐಎಡಿಬಿಗೆ ನೀಡಲು ಒಪ್ಪಿಗೆ ಇದೆ. ಆದ್ರೆ, ನಮ್ಮ ಬೇಡಿಕೆ ಏನೆಂದರೆ, ಈಗ ನಮ್ಮ 13 ಹಳ್ಳಿಗಳಲ್ಲಿ 1700 ಎಕರೆ, 2400 ಎಕರೆ ತೆಗೆದುಕೊಂಡಿದ್ದಾರೆ. ತೆಗೆದುಕೊಂಡ ಜಮೀನುಗಳನ್ನು ಏನು ಮಾಡಿದ್ದಾರೆಂದರೆ, ಈಹಿಂದೆ ಕುಂದಾಣ ಹೋಬಳಿ, ಕಸಬಾ ಕಡೆಗಳಲ್ಲಿ ತೆಗೆದುಕೊಂಡ ಜಮೀನುಗಳಿಗೆ 10 ವರ್ಷ -12 ವರ್ಷ ಅವರಿಗೆ ಪಹಣಿಯಲ್ಲಿ ಕೆಐಎಡಿಬಿ ಎಂದು ನಮೂದು ಮಾಡಿದ್ದಾರೆ. ಇದರಿಂದ ಸಾಲಸೌಲಭ್ಯ, ರಿಜಿಸ್ಟಾçರ್ ಆಫೀಸ್‌ಗೆ ಹೋದರೆ ಭೂಸ್ವಾಧೀನವಾಗಿದೆ ಈ ಜಮೀನು ಎಂದು ಹೇಳುತ್ತಾರೆ. ಯಾವುದೇ ಮನೆ, ಮದುವೆ ಮಾಡಲು ಆಗುತ್ತಿಲ್ಲ. ರೈತರಿಗೆ ಹೆಚ್ಚಿನ ಅನಾನುಕೂಲವಾಗುತ್ತಿದೆ. ಕೆಐಎಡಿಬಿಯವರು ವಶಕ್ಕೆ ಪಡೆಯುತ್ತಿರುವ ರೈತರ ಜಮೀನಿಗೆ ಎಕರೆಗೆ 3-4ಕೋಟಿ ರೂ.ಗಳಷ್ಟು ಪರಿಹಾರ ನೀಡಬೇಕು. ಜತೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

7 ಬೇಡಿಕೆಗಳು

• ಪ್ರತಿ ಎಕರೆ ಜಮೀನಿಗೆ 4ಕೋಟಿ ರೂ. ಪರಿಹಾರ

• ಜಮೀನು ಕಳೆದುಕೊಂಡ ರೈತರ ಮನೆಯವರಿಗೆ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ

• ಗ್ರಾಮ ಠಾಣಾ ಪ್ರದೇಶದಿಂದ 500ಮೀಟರ್ ನಂತರದ ಜಮೀನನ್ನು ಮಾತ್ರ ಭೂಸ್ವಾದೀನ

• ಕೆಐಎಡಿಬಿಯವರು ಜಮೀನನ್ನು ಸ್ವಾಧಿನಪಡಿಸಿಕೊಂಡು ಅಭಿವೃದ್ಧಿಪಡಿಸಿದ ನಂತರ ಗ್ರಾಮಕ್ಕೆ 10 ಎಕರೆ ಜಮೀನನ್ನು ಸಾರ್ವಜನಿಕ ಉಪಯೋಗಕ್ಕೆ ಕಾಯ್ದಿರಿಸುವುದು

• 10 ವರ್ಷಗಳವರೆಗೆ ಎಲ್ಲಾ ಗ್ರಾಮಗಳ ಮೂಲ ಸೌಕರ್ಯ ಒದಗಿಸುವುದು

• ಕೆಐಎಡಿಬಿ ವಶಪಡಿಸಿಕೊಂಡ ಜಮೀನಿನ ಪಕ್ಕದಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವಂತೆ ಸಾರ್ವಜನಿಕರಿಗೆ ಮುಕ್ತ ಓಡಾಟಕ್ಕೆ 60 ಅಡಿ ರಸ್ತೆ ನಿರ್ಮಾಣ

• 13 ಹಳ್ಳಿಗಳಲ್ಲಿರುವ ಶಾಲೆ, ದೇವಸ್ಥಾನ ಮತ್ತು ರಸ್ತೆಯನ್ನು ಕೆಐಎಡಿಬಿಯವರೇ ಅಭಿವೃದ್ಧಿ ಪಡಿಸುವುದು.

ಅಪರ ಜಿಲ್ಲಾಧಿಕಾರಿ ವಿಜಯ ಈ ರವಿಕುಮಾರ್ ಮಾತನಾಡಿ, ಕೆಐಎಡಿಬಿ ಇಲಾಖೆಯಿಂದ ರೈತರನ್ನು ಕರೆಸಿ ಮಂತ್ರಿಗಳೊAದಿಗೆ ಚರ್ಚಿಸಲಾಗಿತ್ತು. ಅಲ್ಲಿ ನಿಮ್ಮಗಳ ಬೇಡಿಕೆ ಏನಾದರೂ ಇದ್ದರೆ, ತಿಳಿಸಿ ಎಂದು ಹೇಳಿದ್ದಾರೆ. ಆದ್ರೆ, ಕೆಲವು ರೈತರು ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಈಗ ಪರವಾಗಿ 1400 ಎಕರೆ ಸ್ವಾಧೀನವಾಗಿರುವ ರೈತರು ಬಂದಿದ್ದಾರೆ. ಈ ಬೇಡಿಕೆಗಳೇನಿದೆ ಅದನ್ನು ಕೆಐಎಡಿಬಿ ಇಲಾಖೆಗೆ ಕಳುಹಿಸಿಕೊಡುವ ಕೆಲಸ ಮಾಡಲಾಗುತ್ತದೆ. ಅಲ್ಲಿಂದ ಕ್ರಮಕೈಗೊಳ್ಳುತ್ತಾರೆ ಎಂದರು.

ಈ ವೇಳೆ ವಿಜಯಪುರ ವೃತ್ತ ನಿರೀಕ್ಷಕ ಬಸವರಾಜ್ ಬಿ.ಪಾಟೀಲ್, ಎಸ್‌ಐಗಳಾದ ವೆಂಕಟೇಶ್, ನಂದೀಶ್, ಶರಣಪ್ಪ, ಪೊಲೀಸ್ ಸಿಬ್ಬಂದಿ, ಕೆಐಎಡಿಬಿಗೆ ಸ್ವಾಧೀನವಾಗುತ್ತಿರುವ ಜಮೀನುಗಳ ರೈತರುಗಳು, ಮುಖಂಡರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments