Monday, June 24, 2024
spot_img
HomeChamarajanagarಕರಾಟೆ ಕೌಶಲ್ಯ ತರಬೇತಿ ಸದುಪಯೋಗಕ್ಕೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರ ಸಲಹೆ

ಕರಾಟೆ ಕೌಶಲ್ಯ ತರಬೇತಿ ಸದುಪಯೋಗಕ್ಕೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರ ಸಲಹೆ

ಚಾಮರಾಜನಗರ: ಆತ್ಮರಕ್ಷಣೆಗಾಗಿ ಕರಾಟೆಯಂತಹ ಕೌಶಲ್ಯ ತರಬೇತಿ ನೀಡುತ್ತಿರುವ ಸೌಲಭ್ಯವನ್ನು ಹೆಣ್ಣು ಮಕ್ಕಳು ಸದುಪಯೋಗ ಮಾಡಿಕೊಳ್ಳಬೇಕೆಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.

ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಇಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ವಸತಿ ಶಾಲೆಗಳು ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿನಿಯರಿಗೆ ನೀಡುವ ಓಬವ್ವ ಆತ್ಮರಕ್ಷಣಾ ಕಲೆ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ವೈಯಕ್ತಿಕವಾಗಿ ರಕ್ಷಣಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಿಂದಲೇ ಆತ್ಮ ರಕ್ಷಣೆಗಾಗಿ ಕರಾಟೆಯಂತಹ ತರಬೇತಿ ನೀಡುತ್ತಿರುವುದು ಉತ್ತಮವಾಗಿದೆ. ಈ ತರಬೇತಿಯನ್ನು ವಿದ್ಯಾರ್ಥಿನಿಯರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕರು ತಿಳಿಸಿದರು.

ಕರಾಟೆ ಹೆಣ್ಣು ಮಕ್ಕಳ ಸ್ವಯಂ ರಕ್ಷಣೆಗೆ ಅನುಕೂಲವಾಗಿದೆ. ಚಿಕ್ಕವಯಸ್ಸಿನಿಂದಲೇ ಕಲಿಯುವುದು ಸೂಕ್ತ. ಪ್ರತಿಯೊಬ್ಬರಿಗೂ ಕ್ರೀಡೆ ಎಂಬುದು ಅತ್ಯಂತ ಮುಖ್ಯವಾಗಿದೆ. ಆರೋಗ್ಯ ಉದ್ದೇಶದಿಂದಲೂ ಕ್ರೀಡೆಗೆ ಉತ್ತೇಜನ ನೀಡಬೇಕಿದೆ ಎಂದರು.

ಒನಕೆ ಓಬವ್ವ ಕೆಚ್ಚೆದೆಯ ಮಹಿಳೆಯಾಗಿದ್ದು ಚಿತ್ರದುರ್ಗ ಕೋಟೆಯನ್ನು ಮುತ್ತಿಗೆ ಹಾಕಲು ಬಂದ ಹೈದರಾಲಿ ಸೈನ್ಯವನ್ನು ಸಂಹಾರ ಮಾಡಿದ ದಿಟ್ಟ ಮಹಿಳೆ. ಓಬವ್ವನ ಹೆಸರಿನಲ್ಲಿ ಸರ್ಕಾರವು ಕೌಶಲ್ಯ ತರಬೇತಿ ನೀಡಲು ಮುಂದಾಗಿರುವುದು ಉತ್ತಮವಾಗಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರ ಸಂದೇಶವನ್ನು ಕಾರ್ಯಕ್ರಮದಲ್ಲಿ ವಾಚಿಸಲಾಯಿತು.

ಮೆಟ್ರಿಕ್ ನಂತರದ ಬಾಲಕಿಯರಿಗೆ ಆತ್ಮವಿಶ್ವಾಸ ಮೂಡಿಸುವ ಮತ್ತು ಸ್ವಯಂ ರಕ್ಷಣೆಗಾಗಿ ಓಬವ್ವ ಆತ್ಮರಕ್ಷಣ ಕಲೆ ಕೌಶಲ್ಯ ತರಬೇತಿ ಎಂಬ ಹೆಸರಿನಲ್ಲಿ ಕರಾಟೆ ತರಬೇತಿ ನೀಡುವ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ವಿದ್ಯಾಭ್ಯಾಸದ ಜೊತೆಗೆ ಬಾಲಕಿಯರು ತಮ್ಮನ್ನು ತಾವು ಸ್ವಯಂ-ರಕ್ಷಣೆ ಮಾಡಿಕೊಳ್ಳುವ ಹಾಗೂ ದೌರ್ಜನ್ಯ ಮತ್ತು ಶೋಷಣೆಗಳ ವಿರುದ್ದ ಹೋರಾಡಲು ಆತ್ಮಸ್ಥೆöÊರ್ಯ ತುಂಬುವ ದಿಸೆಯಲ್ಲಿ ಅತ್ಯುತ್ತಮವಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ಅವರು ಫೆಬ್ರವರಿ 6ರಂದು ಉದ್ಘಾಟನೆ ಮಾಡಿರುವುದು ಸಂತೋಷ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಾನು ನೆರವೇರಿಸಬೇಕಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಬಾಲಕಿಯರ ಸಬಲೀಕರಣದ ದೃಷ್ಠಿಯಿಂದ ಹಮ್ಮಿಕೊಂಡಿರುವ ಓಬವ್ವ ಆತ್ಮರಕ್ಷಣೆ ಕಲೆ ಕೌಶಲ್ಯ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ ಎಂದು ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಮಾತನಾಡಿ, ಮಹಿಳೆಯರು ಆತ್ಮರಕ್ಷಣೆಗೆ ಕರಾಟೆ ಕಲಿಸಲು ಸರ್ಕಾರವು ಮುಂದಾಗಿರುವುದು ಉತ್ತಮ ಉದ್ದೇಶವಾಗಿದೆ. ಮಹಿಳೆ ಅಬಲೆಯಲ್ಲ ಸಬಲೆ. ಕುಟುಂಬದಲ್ಲಿ ಮಹಿಳೆಯರು ಇಲ್ಲದಿದ್ದರೆ ಆ ಕುಟುಂಬವನ್ನು ಊಹೆ ಮಾಡಿಕೊಳ್ಳುವುದೂ ಸಹ ಅಸಾಧ್ಯ. ಕೋಟೆ ರಕ್ಷಣೆಗೆ ಓಬವ್ವ ಶತ್ರುಗಳನ್ನು ಸಂಹರಿಸಿದ್ದು ಸ್ಮರಣೀಯ. ಓಬವ್ವ ಹೆಸರಿನಲ್ಲಿ ವಿದ್ಯಾರ್ಥಿನಿಯರಿಗೆ ನೀಡುವ ಕೌಶಲ ತರಬೇತಿ ಅನುಕೂಲವಾಗಲಿ ಎಂದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ ಅವರು ಮಾತನಾಡಿ ದೇಶ ಕಟ್ಟುವಲ್ಲಿ ಮಹಿಳೆಯರ ಪಾತ್ರ ಪ್ರಾಮುಖ್ಯವಾಗಿದೆ. ಪುರುಷರಷ್ಟೇ ಸಮಾನವಾದ ಪ್ರಾಮುಖ್ಯತೆ ಮಹಿಳೆಯರಿಗೂ ಇದೆ. ಸ್ವರಕ್ಷಣೆ, ಆತ್ಮವಿಶ್ವಾಸ ಮಹಿಳೆಯರಲ್ಲೂ ಮೂಡಿಸಬೇಕಿದೆ. ಇಂತಹ ದಿಕ್ಕಿನಲ್ಲಿ ಕರಾಟೆಯಂತಹ ಕೌಶಲ ತರಬೇತಿ ನೀಡುವ ಸರ್ಕಾರದ ವಿನೂತನ ಕಾರ್ಯಕ್ರಮ ಪ್ರಶÀಂಸÀನೀಯ ಎಂದರು.

ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಕರಾಟೆ ತರಬೇತಿಯ ಜಿಲ್ಲಾಧ್ಯಕ್ಷ ರಾಜೇಂದ್ರ, ವಸತಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಸಂಯೋಜಕರಾದ ಮಹದೇವಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಭಾಗೀರಥಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರೇವಣ್ಣ, ನಂಜುAಡಸ್ವಾಮಿ, ಭವ್ಯಶ್ರೀ, ಯೋಗೇಶ್, ರಮೇಶ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ವಿದ್ಯಾರ್ಥಿನಿಯರಿಂದ ಕರಾಟೆ ಆರಂಭಿಕ ತರಬೇತಿ ಪ್ರದರ್ಶನ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments