Monday, June 24, 2024
spot_img
HomeChikballapur*ಎಲ್ಲ ಮಕ್ಕಳಿಗೆ ಲಸಿಕೆ ಸಿಗಲಿ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ*

*ಎಲ್ಲ ಮಕ್ಕಳಿಗೆ ಲಸಿಕೆ ಸಿಗಲಿ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ*

Palar Pathrike| Palar Patrike | ಪಾಲಾರ್ ಪತ್ರಿಕೆ

*ಚಿಕ್ಕಬಳ್ಳಾಪುರ: *ಜಿಲ್ಲೆಯ ಎಲ್ಲ ಮಕ್ಕಳಿಗೆ ಲಸಿಕೆ ಸಿಗಲಿ “ಯಾವೊಂದು ಗರ್ಭಿಣಿ ಮತ್ತು ಮಗು ಲಸಿಕೆಯಿಂದ ವಂಚಿತರಾಗದಂತೆ” ಲಸಿಕೆಯನ್ನು ಪಡೆದು ಆರೋಗ್ಯವಾಗಿರುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತಿಳಿಸಿದರು.

ಸೋಮವಾರ ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಘ- ಸಂಸ್ಥೆಗಳು, ಚಿಕ್ಕಬಳ್ಳಾಪುರ ಇವರ ಸಂಯುಕ್ತಶ್ರಾಯದಲ್ಲಿ ಆಯೋಜಿಸಿದ್ಧ “ಇಂದ್ರ ಧನುಷ್ 5.0” ಕಾರ್ಯಕ್ರಮವನ್ನು ಉದ್ಘಾಟಿಸಿ ಮಗುವಿಗೆ ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾರಕ ಕಾಯಿಲೆಗಳಾದ ದಡಾರ-ರುಬೆಲ್ಲಾ, ಜೆಇ- ಮೆದುಳು ಜ್ವರ,ಟಿಡಿ-ಗಂಟಲು ಮಾರಿ ಮತ್ತು ಧನುರ್ವಾಯು ಈ ಎಲ್ಲ ರೋಗಗಳಿಂದ ಮಕ್ಕಳನ್ನು ಮುಕ್ತ ಮಾಡಲು ಅವುಗಳನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಲಸಿಕೆಗಳನ್ನು ನೀಡಬೇಕು. 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಲಸಿಕೆಗಳನ್ನು ನೀಡಬೇಕು. ಇಂದ್ರಧನುಷ್‌ 5.0 ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಹಳ್ಳಿಗಳು,ಕೊಳಚೆ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ಸಂಬಂಧ ಆರೋಗ್ಯಧಿಕಾರಿಗಳು ಆಶಾ ಕಾರ್ಯಕರ್ತೆಯರಿಗೆ ಲಸಿಕೆ ಪಡೆಯುವವರನ್ನು ಗುರುತಿಸುವ ಕೆಲಸ ಆಗಬೇಕು. ಲಸಿಕೆ ನೀಡುವಾಗ ಮಕ್ಕಳ ಆರೋಗ್ಯ ಪರಿಸ್ಥಿಯನ್ನು ಪರೀಕ್ಷಿಸಿ ನೀಡಬೇಕು. ಯಾವುದೇ ಅಡ್ಡ ಪರಿಣಾಮಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ 3 ಸುತ್ತುಗಳಲ್ಲಿ ಅಭಿಯಾನ ನಡೆಯಲಿದೆ. ಅಭಿಯಾನವು ಆಗಸ್ಟ್(7ರಿಂದ 12ರವರೆಗೆ), ಸೆಪ್ಟೆಂಬರ್ (11ರಿಂದ 16ರವರೆಗೆ) ಮತ್ತು ಅಕ್ಟೋಬರ್ (9ರಿಂದ 14ರವರೆಗೆ) ತಿಂಗಳುಗಳಲ್ಲಿ ನಡೆಯಲಿದ್ದು, ಪ್ರತಿ ತಿಂಗಳಲ್ಲಿ 6 ದಿನ ಲಸಿಕಾ ಪ್ರಕ್ರಿಯೆ ನಡೆಯಲಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. 3 ಸುತ್ತುಗಳಲ್ಲಿ ನಿರ್ಧಿಷ್ಟ 6 ದಿನಗಳಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ಲಸಿಕೆಯಿಂದ ವಂಚಿತರಾದ ಗರ್ಭಿಣಿ ಮಹಿಳೆಯರು ಮತ್ತು 0-5 ವರ್ಷದ ಮಕ್ಕಳನ್ನು U-WIN ಪೋರ್ಟಲ್ ಮತ್ತು ತಾಯಿ ಕಾರ್ಡ್ ಮೂಲಕ ನೊಂದಾಯಿಸಿಕೊಂಡು,ಮಕ್ಕಳಿಗೆ ಲಸಿಕೆಯನ್ನು ನೀಡಲಾಗುತ್ತದೆ. ಆರೋಗ್ಯವಂತ ಮಾನವ ಸಂಪತ್ತು ಇದ್ದರೆ ಸಮಾಜ, ದೇಶ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರಮೇಶ್ ಪಿ.ವಿ. ಅವರು ಮಾತನಾಡಿ ಪ್ರತಿಯೊಂದು ತಾಯಿಗೂ ತನ್ನ ಮಗುವು ಲವಲವಿಕೆಯಿಂದ ಆರೋಗ್ಯವಾಗಿ ನಗುನಗುತಾ ಇರಬೇಕು.ಆ ಮಗುವು ಒಳ್ಳೆಯ ಆರೋಗ್ಯ ಪಡೆಯಬೇಕೆಂದು ಬಯಸುತ್ತಾರೆ.ಆದರೆ ಆ ಮಗು ಜನಿಸಿದಾಗ ಈ ಪ್ರಕೃತಿ, ವಾತಾವರಣದಿಂದ ಆಗುವ ಕೆಲವು ಸನ್ನಿವೇಶಗಳಿಂದ ಸೋಂಕು ಮಕ್ಕಳಿಗೆ ತಗುಲಿ ಅನೇಕ ವರ್ಷಗಳಿಂದ ಆ ಸೋಂಕಿಗೆ ಯಾವುದೇ “ಅಮೃತ ಹನಿ” ಎಂದು ಕರೆಯುವ ಚುಚ್ಚುಮದ್ದು, ಲಸಿಕೆ, ಸಿಗದೆ, ಎಷ್ಟೋ ಮಕ್ಕಳು ಸಾವನ್ನಪ್ಪುತ್ತವೆ. ವಿಜ್ಞಾನಿಗಳು ಅಧ್ಯಯನ ಮಾಡಿ ಈ ಮಾರಕವಾದ ಸೋಂಕುಗಳನ್ನು ನಿರ್ಮೂಲನೆ ಹಾಗೂ ತಡೆಗಟ್ಟಲು ಲಸಿಕೆಗಳನ್ನು ಕಂಡುಹಿಡಿದಿದ್ದಾರೆ. ಸಾವು ನೋವು, ಅಂಗವಿಕಲತೆಯನ್ನು ತಡೆಗಟ್ಟುವಂತಹ ಅವಕಾಶಗಳು “ಅಮೃತ ಹನಿ” ಚುಚ್ಚುಮದ್ದು, ಲಸಿಕೇಗಳಿಗಿದೆ. ಆರೋಗ್ಯ ಇಲಾಖೆಯಿಂದ ನಿಗದಿಪಡಿಸಿರುವ ಸಮಯಕ್ಕೆ ಈ ಮದ್ದು ಗಳನ್ನು ಹಾಕಿಸಿಕೊಳ್ಳಬೇಕು ಎಂದು ಹೇಳಿದರು.

ಲಸಿಕೆಯನ್ನು ಮಕ್ಕಳಿಗೆ ಕೊಡುವುದರಿಂದ ಮಕ್ಕಳು ಯಾವುದೇ ರೋಗ ರುಜಿನಗಳು, ಬುದ್ಧಿಮಾಂದ್ಯ, ಅಂಗವಿಕಲತೆಗಳನ್ನು ಒಳಗಾಗದೆ.ಎಲ್ಲ ಚಟುವಟಿಕೆಗಳಲ್ಲಿ,ಆಟಪಾಟಗಳಲ್ಲಿ ತೊಡಗಿಸಿಕೊಂಡು ಒಳ್ಳೆಯ ಜೀವನ ಆರೋಗ್ಯ ಶೈಲಿಯನ್ನು ಹೊಂದುತ್ತವೆ ಎಂದರು.

ಈ ಸಂಧರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಪ್ರಕಾಶ್ ಎಂ, ನಗರಸಭೆ ಆಯುಕ್ತೆ ಪಂಪಶ್ರೀ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಹರೀಶ್ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಪ್ರಕಾಶ್, ಡಾ. ಕೃಷ್ಣಪ್ರಸಾದ್, ಶಾಲೆಯ ಮುಖ್ಯೋಪಾಧ್ಯಯರು,ಶಿಕ್ಷಕರು,ವಿದ್ಯಾರ್ಥಿಗಳು,ಅಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments