Wednesday, April 24, 2024
spot_img
HomeBangaloreಇತಿಹಾಸ ಪ್ರಸಿದ್ಧ ಶ್ರೀ ವೇಣುಗೋಪಾಲಸ್ವಾಮಿ ವಿಜೃಂಭಣೆ ಬ್ರಹ್ಮ ರಥೋತ್ಸವ ಸಹಸ್ರ ಭಕ್ತಾಧಿಗಳ ಸಮ್ಮೂಕದಲ್ಲಿ ಸಾಗಿದ ವಜ್ರವೈಡೂರ್ಯ...

ಇತಿಹಾಸ ಪ್ರಸಿದ್ಧ ಶ್ರೀ ವೇಣುಗೋಪಾಲಸ್ವಾಮಿ ವಿಜೃಂಭಣೆ ಬ್ರಹ್ಮ ರಥೋತ್ಸವ ಸಹಸ್ರ ಭಕ್ತಾಧಿಗಳ ಸಮ್ಮೂಕದಲ್ಲಿ ಸಾಗಿದ ವಜ್ರವೈಡೂರ್ಯ ಖಚಿತ ಗೋಪಾಲ | ಮಹೋತ್ಸವದಲ್ಲಿ ಪೊಲೀಸ್ ಬಿಗಿಬಂದೋಬಸ್ತ್

ದೇವನಹಳ್ಳಿ: ಪಟ್ಟಣದ ಕೋಟೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮ ರಥೋತ್ಸವ ಪ್ರತಿ ವರ್ಷದಂತೆ ಈ ವರ್ಷಗೂ ಸಹ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ನಡೆದಿದ್ದು, ಸಹಸ್ರಾರು ಭಕ್ತಾಧಿಗಳು ತಮ್ಮ ಭಕ್ತಿಯನ್ನು ತೇರಿನ ಮೇಲ್ಭಾಗದ ಕಳಸಕ್ಕೆ ದವನ ಮತ್ತು ಬಾಳೆಹಣ್ಣು ಸಮರ್ಪಣೆ ನೇರವೇರಿಸಿದರು.

ಪಟ್ಟಣದ ಗಾಂಧಿ ಚೌಕದಿಂದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದವರೆಗೆ ಜಾತ್ರೆ ನಡೆಯುತ್ತಿದ್ದು,

ಶ್ರೀವೇಣುಗೋಪಾಲಸ್ವಾಮಿಗೆ ಅಲಂಕಾರ: ಸ್ವಾಮಿಗೆ ಬೆಳಗಿನಿಂದಲೇ ಅಭಿಷೇಕ ಹಾಗೂ ವಿವಿಧ ಪೂಜಾ ಕೈಂಕಾರ್ಯಗಳನ್ನು ಕೈಗೊಂಡು, ಸ್ವಾಮಿಗೆ ತಾಲೂಕಿನ ಖಜಾನೆಯ ಸೌಮ್ಯದಲ್ಲಿದ್ದ ವಜ್ರ, ವೈಡೂರ್ಯ ಕಿರೀಟ ಹಾಗೂ ಚಿನ್ನಾಭರಣಗಳನ್ನು ದೇವಸ್ಥಾನಕ್ಕೆ ಕಳುಹಿಸಿಕೊಡುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ವಿಜಯ ಈ ರವಿಕುಮಾರ್, ತಹಶೀಲ್ದಾರ್ ಶಿವರಾಜ್ ರವರು ಇದ್ದರು. ಶಾಸಕ ಎಲ್.ಎನ್.ನಾರಾಯಣಸ್ವಾಮಿ ಹಾಗೂ ಮಾಜಿ ಪುರಸಭಾ ಅಧ್ಯಕ್ಷ ಸಿ.ಜಗನ್ನಾಥ್ ದೇವರ ಒಡವೆಗಳನ್ನು ದೇವಾಲಯಕ್ಕೆ ತೆರೆದುಕೊಂಡು ಹೋದರು. ನವರತ್ನ ಖಚಿತ ಒಡವೆಗಳನ್ನು ಅಲಂಕರಿಸಿ ಸ್ವಾಮಿಯ ಪಲ್ಲಕಿಯನ್ನು ದೇವಾಲಯಕ್ಕೆ ಮೂರು ಸುತ್ತು ಪ್ರದಕ್ಷಿಣೆ ಮಾಡುವ ಮೂಲಕ ರಥದಲ್ಲಿ ಸ್ವಾಮಿಯನ್ನು ಕೂರಿಸಿದರು. ಈ ವೇಳೆಯಲ್ಲಿ ಭಕ್ತಾಧಿಗಳು ಗೋವಿಂದಾ… ಗೋವಿಂದಾ… ಎಂಬ ನಾಮದಿಂದ ಘೋಷಣೆ ಮೊಳಗಿತು.

ಪೊಲೀಸ್ ಕಣ್ಗಾವಲಿನಲ್ಲಿ ಸ್ವಾಮಿಯ ಪ್ರದಕ್ಷಿಣೆ: ಸ್ವಾಮಿಗೆ ಅಲಂಕರಿಸಿದ ವಜ್ರದ ಕಿರೀಟ ಹಾಗೂ ಆಭರಣಗಳನ್ನು ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ತಹಶೀಲ್ದಾರ್, ಶಾಸಕರ ಹಾಗೂ ಸಮುದಾಯ ಮುಖಂಡರ ಸಮ್ಮೂಖದಲ್ಲಿ ಮತ್ತೇ ಖಜಾನೆಗೆ ಕಳುಹಿಸಲಾಯಿತು.

ಜಾತ್ರೆಯಲ್ಲಿ ಜನಸಾಗರ: ಜಾತ್ರೆಗೆ ದೇವನಹಳ್ಳಿ ತಾಲೂಕು ಹಾಗೂ ಸುತ್ತಮುತ್ತಲಿನ ಹಲವಾರು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ದೇವಾಲಯದಿಂದ ಗಾಂಧಿ ಚೌಕದವರೆಗೆ ಭಕ್ತಾಧಿಗಳ ದಂಡು ಹರಿದು ಬಂದಿತ್ತು. ರಸ್ತೆಯ ಅಕ್ಕಪಕ್ಕದಲ್ಲಿ ಅಂಗಡಿಗಳು ತೆರೆದು ವ್ಯಾಪಾರಸ್ಥರು ಬಲು ಜೋರು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದು ಗಮನಸೆಳೆಯಿತು. ಅಲ್ಲದೆ ವಿವಿಧ ಸಮಿತಿಗಳಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು. ಭಕ್ತಾಧಿಗಳು ಸ್ವಾಮಿಯನ್ನು ಕಣ್ಮುಂಬಿಕೊAಡು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸುತ್ತಿರುವುದು ಕಂಡು ಬಂತು.

ಪೊಲೀಸರ ನಿಯೋಜನೆ: ಎರಡು ದಿನ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ಸೇರಿದಂತೆ ಕಾಲ್ತುಳಿತ, ಕಳ್ಳತನ, ಸರಗಳ್ಳರು, ಜೇಬುಗಳ್ಳರ ಮೇಲೆ ಪೊಲೀಸರು ಅಲ್ಲಲ್ಲಿ ಮಫ್ಟಿಯಲ್ಲಿ ಬಿಗಿಬಂದೋಬಸ್ತ್ನೊAದಿಗೆ ಜಾತ್ರೆಯಲ್ಲಿ ನಿಗಾವಹಿಸಲಾಗಿದೆ.

ಇದೇ ಸಂದರ್ಭದಲ್ಲಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ, ತಾಲೂಕು ದಂಡಾಧಿಕಾರಿ ಶಿವರಾಜ್, ಜಿಲ್ಲಾಧಿಕಾರಿ ಕಚೇರಿಯ ಆರ್‌ಹೆಚ್.ಎಂ ಗಂಗಾಧರ್, ಪುರಸಭಾ ಅದ್ಯಕ್ಷೆ ರೇಖಾವೇಣುಗೋಪಾಲ್, ಉಪಾಧ್ಯಕ್ಷೆ ಪುಷ್ಪಲತಾಲಕ್ಷಿö್ಮÃನಾರಾಯಣ್, ಮುಖಂಡರುಗಳಾದ ಸಿ.ಜಗನ್ನಾಥ್, ವೇಣುಗೋಪಾಲ್, ಸೊಸೈಟಿ ಕುಮಾರ್, ಗುಟ್ಟಳ್ಳಿ ರವಿ, ವಸಂತ ಬಾಬು, ನಾಗೇಶ್ ಬಾಬು, ಸಿ.ವೆಂಕಟೇಶ್, ಎನ್.ರಘು, ಲಕ್ಷಿö್ಮÃನಾರಾಯಣ್ (ಲಚ್ಚಿ), ನಾರಾಯಣಸ್ವಾಮಿ, ಮುಖ್ಯಾಧಿಕಾರಿ ಎ.ಹೆಚ್.ನಾಗರಾಜ್, ಅಧಿಕಾರ ವೃಂದ ಹಾಗೂ ಭಕ್ತಾಧಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments